ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಮೂರು ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜೂ. ೭ರಿಂದ ೯ರವರೆಗೆ ಪ್ರಥಮ ಹಂತದ ಪರೀಕ್ಷೆಗಳು ನಡೆಯಲಿದ್ದು, ಇನ್ನು ದ್ವಿತೀಯ ಹಂತದ ಪರೀಕ್ಷೆಗಳು ವಿಭಾಗೀಯ ಕೇಂದ್ರಗಳಲ್ಲಿ ಜೂ. ೧೧ರಿಂದ ೨೩ರ ತನಕ ಆಯೋಜಿಸಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ಈ ಪರೀಕ್ಷೆ ಜರುಗಲಿದೆ. ತೃತೀಯ ಹಂತದ ಪರೀಕ್ಷೆ ಜೂ.೨೪ರಿಂದ ೨೯ರ ತನಕ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿದೆ ಎಂದು ಕೆಪಿಎಸ್ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್ಸಿ ವೆಬ್ಸೈಟ್ ಗಮನಿಸಬಹುದು.