ಬಳ್ಳಾರಿ: ಎರ್ರೆಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸುವ ವಿಚಾರಕ್ಕೆ ಗ್ರಾಮಸ್ಥರಲ್ಲಿ ಗಲಾಟೆ ನಡೆದು ಗುಂಪು ಘರ್ಷಣೆಗೆ ತಿರುಗಿದ ಘಟನೆ ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ ನಡೆದಿದೆ.
ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಎಸ್ಸಿ, ಕುರುಬ ಸಮಾಜದ ನಡುವೆ ಗೊಂದಲ ಏರ್ಪಟ್ಟಿದೆ. ಇದೆ ಕ್ರಮೇಣ ಘರ್ಷಣೆಗೆ ಕಾರಣ ಆಗಿದೆ. ಎರಡೂ ಕಡೆಯಿಂದ 50 ಜನರನ್ನು ಬಂಧಿಸಿದ ಪೊಲೀಸರು, ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 150 ಪೋಲಿಸರು, ಒಂದು ಡಿಎಆರ್, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕೆಲ ತಿಂಗಳ ಹಿಂದೆ ಎರ್ರೆಪ್ಪಸ್ವಾಮಿ ಮೂರ್ತಿಯನ್ನು ಎಸ್ಸಿ ಸಮುದಾಯದವರಿ ಸ್ಥಾಪಿಸಿದ್ದರು. ಕುರುಬ ಸಮುದಾಯದವರಿಂದ ಮೂರ್ತಿ ಕುರಿಸುವ ವಿಚಾರಕ್ಕೆ ಗಲಾಟೆ ಆಗಿತ್ತು. ಮಠದ ಮೂಲ ಸ್ವಾಮಿ ಶ್ರೀ ಶ್ರೀ ಎರ್ರೆಸ್ವಾಮಿ ಕುರುಬ ಸಮುದಾಯಕ್ಕೆ ಸೇರಿದ್ದು, ಮೂಲ ಮಠದಲ್ಲಿ ಎಸ್ಸಿ ಸಮುದಾಯಕ್ಕೆ ಸೇರಿದ ಎರ್ರೆಪ್ಪಸ್ವಾಮಿ ಮೂರ್ತಿ ಕುರಿಸಲು ವಿರೋಧ ವ್ಯಕ್ತವಾಗಿದೆ.
ತಡ ರಾತ್ರಿ ಪೋಲಿಸರ ಮೇಲೆ ಗ್ರಾಮಸ್ಥರಿಂದ ಹಲ್ಲೆ
ಬಳ್ಳಾರಿ ಗ್ರಾಮೀಣ ಭಾಗದ CPI ಸತೀಶ್, PSI ಸಂತೋಷ, ಒಬ್ಬರು ಪೋಲಿಸ್ ಪೇದೆ ಮೇಲೆ ಉದ್ರಿಕ್ತ ಗುಂಪು ಕಲ್ಲು ತೂರಿದೆ. ಕೊಳಗಲ್ ಗ್ರಾಮದ 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೋಲಿಸರು. ಪರಿಸ್ಥಿತಿ ಸುಧಾರಿಸಲು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.