ಬೆಂಗಳೂರು: ಬೆಂಗಳೂರಿನ ದಿ. ರಾಮೇಶ್ವರಂ ಕೆಫೆ ಸ್ಫೋಟದ ಪ್ರಕರಣಕ್ಕೆ ಮಹತ್ವದ ತಿರುವು ಪಡೆದಿದ್ದು ಪ್ರಮುಖ ಆರೋಪಿ ಮುಜಾಮಿಲ್ ಜತೆ ಓರ್ವ ಪೊಲೀಸ್ ಅಧಿಕಾರಿ ಸಂಪರ್ಕವಿತ್ತು ಎಂಬ ಮಾಹಿತಿ ವಿಚಾರಣೆಯಲ್ಲಿ ಹೊರಬಿದ್ದಿದೆ. ಈ ಹಿಂದೆ ಮಂಗಳೂರಿನಲ್ಲಿದ್ದ ಮುಜಾಮಿಲ್‌ಗೆ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ಆ ಪೊಲೀಸ್ ಅಧಿಕಾರಿ ಮನೆ ಬಾಡಿಗೆ ಕೊಡಿಸಿದ್ದರು ಎಂದು ಹೇಳಲಾಗುತ್ತಿದ್ದು, ಆ ಮನೆಯಲ್ಲಿ ಮುಜಾಮಿಲ್ ಕಳೆದ ಆರು ತಿಂಗಳಿನಿಂದ ತನ್ನ ತಾಯಿಯೊಂದಿಗೆ ಅದೇ ಬಾಡಿಗೆ ಮನೆಯಲ್ಲಿದ್ದ. ಸ್ಫೋಟ ನಡೆಯುವ ಹಿಂದಿನ ದಿನ ಆ ಮನೆಯಿಂದ ಬೆಂಗಳೂರಿಗೆ ಬಂದಿದ್ದ. ಮುಜಾಮಿಲ್ ಬಂಧನದ ನಂತರ ಆತನ ತಾಯಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಈ ಮಾಹಿತಿ ಸಿಕ್ಕ ಎನ್‌ಐಎ ಅಧಿಕಾರಿಗಳು ಆ ಮನೆಯ ಮೇಲೆ ದಾಳಿ ನಡೆಸಲು ತೆರಳಿದಾಗ ಆ ಮನೆ ಖಾಲಿ ಮಾಡಿದ್ದು ಬೀಗ ಹಾಕಿಕೊಂಡು ಹೋಗಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸದ್ಯ ಆ ಪೊಲೀಸ್ ಅಧಿಕಾರಿಗೆ ಈತನಿಗೆ ಮನೆ ಬಾಡಿಗೆ ಕೊಡಿಸುವಲ್ಲಿ ಯಾವ ಉದ್ದೇಶವಿತ್ತು. ಅಥವಾ ಆರೋಪಿ ಅಧಿಕಾರಿಗೆ ತಪ್ಪು ಮಾಹಿತಿ ನೀಡಿದನೇ? ಇದರಲ್ಲಿ ಅಧಿಕಾರಿಯ ಪಾತ್ರವೇನು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಲು ಮುಂದಾಗಿದ್ದಾರೆ ಎನ್ನಲಾಗಿದೆ.