ಕಾಡಾನೆ ದಾಳಿಗೆ ಮತ್ತೊಬ್ಬ ಕಾರ್ಮಿಕ ಬಲಿ

ಕಾಡಾನೆ
Advertisement

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಟಿಂಬರ್ ಕಾರ್ಮಿಕ ಬಲಿಯಾದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.
ತೋಟಕ್ಕೆ ಆನೆ ಬಂದಿದೆ ಎಂದು ಓಡಿಸಲು ಹೋದ ಟಿಂಬರ್ ಕಾರ್ಮಿಕ ಅಕ್ಬರ್(36) ಎಂಬುವವರು ಮೃತಪಟ್ಟಿದ್ದಾರೆ. ದಾಳಿಯಿಂದ ಕೆಳಕ್ಕೆ ಬಿದ್ದ ಅಕ್ಬರ್‌ನ ಎದೆ ಮೇಲೆ ಆನೆ ಕಾಲಿಟ್ಟು, ದಂತದಿಂದ ತಿವಿದು ಭೀಕರವಾಗಿ ಹತ್ಯೆ ಮಾಡಿದೆ.
ಕಳೆದ 2 ದಿನದ ಹಿಂದೆ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಈ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.