ಕುಷ್ಟಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಟ್ಟಣಕ್ಕೆ ಅ.12ರಂದು ಹೆಲಿಕ್ಯಾಪ್ಟರ್ ಮೂಲಕ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ ಗುರುರಾಜ ಚಲುವಾದಿ ನೇತೃತ್ವದಲ್ಲಿ ಹೆಲಿಕ್ಯಾಪ್ಟರ್ ಇಳಿಸಲು ಹೆಲಿಪ್ಯಾಡ್ ಜಾಗವನ್ನು ವೀಕ್ಷಿಸಿದರು.
ಕೊಪ್ಪಳ ರಸ್ತೆಯಲ್ಲಿ ಬರುವ ಜಾಗೆಯಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದು ಹೀಗಾಗಿ ಸೂಕ್ತವಾದ ಸ್ಥಳವನ್ನು ವೀಕ್ಷಣೆ ಮಾಡುವವರಿಗೆ ನಿರತರಾಗಿದ್ದು ಕಂಡುಬಂದಿದೆ. ನಂತರ ತಹಶಿಲ್ದಾರ ಗುರುರಾಜ ಚಲುವಾದಿ ಮಾತನಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ. 12ರಂದು ಕುಷ್ಟಗಿಗೆ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಈಗಾಗಲೇ ಸರ್ಕಾರದ ವತಿಯಿಂದ ಅಧಿಕೃತವಾಗಿ ಪ್ರವಾಸ ಮಾಡಲಿದ್ದಾರೆ ಹೀಗಾಗಿ ಯಾವುದೇ ರೀತಿ ತೊಂದರೆ ಆಗದಂತೆ ಮುಂಜಾಗೃತ ಕ್ರಮವಾಗಿ ಹೆಲಿಕ್ಯಾಪ್ಟರ್ ನಿಲ್ಲಿಸಲು ಸೂಕ್ತವಾದ ಜಾಗವನ್ನು ಕೊಪ್ಪಳ ರಸ್ತೆ, ಶಾಖಪೂರ್ ರಸ್ತೆ ಹಾಗೂ ತಾವರಗೇರಾ ರಸ್ತೆಯಲ್ಲಿ ಬರುವ ಸೂಕ್ತವಾದ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣಮಾಡಲು ಅಧಿಕಾರಿಗಳ ನೇತೃತ್ವದಲ್ಲಿ ಚರ್ಚೆ ನಡೆಸಲಾಗಿದೆ ಒಂದು ದಿನಗಳಲ್ಲಿ ಹೆಲ್ಲಿಪ್ಯಾಡ್ ನಿರ್ಮಾಣದ ಜೊತೆಗೆ ಸಾರ್ವಜನಿಕರು ಸಲ್ಲಿಸುವ ಮನವಿಯನ್ನು ಆಲಿಸಲು ಬ್ಯಾರಿಕೇಟ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಸಿಪಿಐ ನಿಂಗಪ್ಪ ರುದ್ರಪ್ಪ ಮಾತನಾಡಿ ಅ.12ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮಗಳು ಬೇರೆ ಬೇರೆ ಕಡೆಗೆ ಇರುವುದರಿಂದ ಪೊಲೀಸ್ ಸಿಬ್ಬಂದಿಗಳ ಕೊರತೆ ಬಹಳಷ್ಟು ಕಾಡುತ್ತಿದೆ ಹೀಗಾಗಿ ಹೆಲಿಕ್ಯಾಪ್ಟರ್ ಇಳಿಯುವ ಸ್ಥಳದಲ್ಲಿ ಮಾಧ್ಯಮದವರಿಗೆ ಮತ್ತು ಸಾರ್ವಜನಿಕರು ಸಲ್ಲಿಸುವ ಮನವಿಯ ಜಾಗವನ್ನು ಗುರುತಿಸಿ ಎಲ್ಲ ಜಾಗಗಳಿಗೆ ಬ್ಯಾರಿಕೇಟ್ ಅಳವಡಿಸಲು ಸಕಲ ಸಿದ್ಧತೆ ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಪ್ರಭು ಹುನಗುಂದ ಅವರಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಚಂದ್ರಕಾಂತ ವಡ್ಡಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜನೋತ್ಸವ ಕಾರ್ಯಕ್ರಮಕ್ಕೆ ಸಿಎಂ ಆಗಮನ:
ಅ.೧೨ ರಂದು 3 ಗಂಟೆಗೆ ಬಿಜೆಪಿ ಪಕ್ಷದ ವತಿಯಿಂದ ತಾವರಗೇರಾ ರಸ್ತೆಯಲ್ಲಿ ಬರುವ ಹಾಲಿನ ಡೈರಿಯ ಜಾಗದಲ್ಲಿ ಜನೋತ್ಸವ ಕಾರ್ಯಕ್ರಮ ಜರಗಲಿದೆ ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ನಳಿನ್ ಕಟೀಲು ಸೇರಿದಂತೆ ಕೇಂದ್ರ,ರಾಜ್ಯದ
ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ತಿಳಿಸಿದರು.