ಚಿತ್ರ: ಮೆಹಬೂಬಾ
ನಿರ್ಮಾಣ:ಶಶಿ
ನಿರ್ದೇಶನ: ಅನೂಪ್ ಆಂಟೋನಿ
ತಾರಾಗಣ: ಶಶಿ, ಪಾವನಾ, ಜೈ ಜಗದೀಶ್ ಮತ್ತಿತರರು.
ರೇಟಿಂಗ್ಸ್: 3
- ಗಣೇಶ್
ಆತನಿಗೆ ಆಕೆ ಇಷ್ಟವಾಗುತ್ತಾಳೆ, ಆಕೆಗೆ ಆತ ಕೂಡಾ ಹಿಡಿಸುತ್ತಾನೆ. ಮನಸುಗಳ ಪಿಸುಮಾತು ಆರಂಭ. ಅಲ್ಲಿಂದ ಪ್ರೇಮಪಯಣ.. ಆದರೆ, ಈ ಜೋಡಿಯ ಪ್ರೀತಿಗೆ ಅಡ್ಡವಾಗಿ ಬರುವುದು ಧರ್ಮ. ಏಕೆಂದರೆ ಹುಡುಗಿ ಮುಸ್ಲಿಂ. ಅಲ್ಲಿಂದ ಸಂಕಟ ಶುರು…
ಇದು ‘ಮೆಹಬೂಬಾ’ನ ಲವ್ಸ್ಟೋರಿಯ ಟ್ವಿಸ್ಟ್.
ಬಿಗ್ಬಾಸ್ ಶಶಿ ನಾಯಕರಾಗಿ ನಟಿಸಿರುವ ‘ಮೆಹಬೂಬಾ’ ಒಂದು ಲವ್ಸ್ಟೋರಿ ಸಿನಿಮಾದ ಜೊತೆಗೆ ಇವತ್ತಿನ ಸಂದರ್ಭದಲ್ಲಿ ಆಲೋಚಿಸಬೇಕಾದ ಅಂಶಗಳೊಂದಿಗೆ ಮೂಡಿಬಂದಿರುವ ಚಿತ್ರ. ಇಲ್ಲಿ ಪ್ರೇಮಿಗಳಿದ್ದಾಾರೆ, ಅವರ ಹಿಂದೆ ಧರ್ಮವಿದೆ, ಅಡೆತಡೆ, ಅಡಚಣೆ, ಸಂಕಟ, ಪರದಾಟ ಎಲ್ಲವೂ ಇದೆ. ಆದರೆ, ಅವೆಲ್ಲವನ್ನು ದಾಟಿ ಅವರು ಒಂದಾಗುತ್ತಾರಾ ಎಂಬುದೇ ಈ ಸಿನಿಮಾ ಕುತೂಹಲಕರ ಅಂಶ. ನಿರ್ದೇಶಕ ಅನೂಪ್ ಅಂಟೋನಿ ಸಿನಿಮಾವನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಲವು ವಿಚಾರಗಳನ್ನು ಕಟ್ಟಿಕೊಡಬೇಕೆಂಬ ಅವರ ಹಂಬಲ, ತುಡಿತ ಸಿನಿಮಾದಲ್ಲಿ ಎದ್ದು ಕಾಣುತ್ತದೆ. ಆದರೆ, ಅನ್ಯಧರ್ಮದ ಪ್ರೇಮಿಗಳಿಗೆ ಎದುರಾಗುವ ಸಮಸ್ಯೆ ಹಾಗೂ ಅದರ ನಡುವಿನ ಸೂಕ್ಷ್ಮತೆಗಳನ್ನು ಸಮರ್ಥವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ನಾಯಕ ಶಶಿ ಪಾತ್ರಕ್ಕೆ ನ್ಯಾಾಯ ಒದಗಿಸಿದ್ದಾಾರೆ. ಜೊತೆಗೆ ಆ್ಯಕ್ಷನ್ ದೃಶ್ಯಗಳಲ್ಲೂ ಇಷ್ಟವಾಗುತ್ತಾರೆ. ನಾಯಕಿ ಪಾವನಾ ಮತ್ತೊಮ್ಮೆ ತಾನು ಒಳ್ಳೆಯ ನಟಿ ಎಂಬುದನ್ನು ಸಾಬೀತುಪಡಿಸಿದ್ದಾರೆ.