ಹುಬ್ಬಳ್ಳಿ: ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಆಗುವುದಿಲ್ಲ. ಬೆಳಗಾವಿ ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಕಾದು ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಜೆಪಿಗೆ ವಾಪಸ್ ಆಗುವ ವೇಳೆ ಇಂತಹುದ್ದೇ ಕ್ಷೇತ್ರ ಬೇಕು ಎಂದು ಬೇಡಿಕೆ ಇಟ್ಟಿರಲಿಲ್ಲ. ವರಿಷ್ಠರು ಸೂಚಿಸಿದ ಕ್ಷೇತ್ರದಿಂದಲೇ ಸ್ಫರ್ಧಿಸುವೆ ಎಂಬ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಕೆಲ ಆಂತರಿಕ ವಿಚಾರಗಳನ್ನು ಬಹಿರಂಗ ಪಡಿಸಲು ಸಾದ್ಯವಿಲ್ಲ. ಹಿಂದೆ ಕಾಂಗ್ರೆಸ್ ಸೇರಿದಾಗಲು ಪಶ್ಚಾತಾಪ ಆಗಿರಲಿಲ್ಲ. ಈಗ ಬೆಜೆಪಿಗರ ವಾಪಸಾದಾಗಲೂ ಪಶ್ಚಾತಾಪ ಆಗಿಲ್ಲ ಎಂದರು.
ಶೆಟ್ಟರ ಕುಟುಂಬವನ್ನು ತುಳಿಯಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಪ್ರದೀಪ ಶೆಟ್ಟರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ, ಈ ವಿಚಾರ ಜನರಿಗೆ ತಿಳಿದಿದೆ. ನನ್ನ ಬಾಯಿಂದ ಹೇಳುವ ಅವಶ್ಯತೆ ಇಲ್ಲ.
ಬೆಳಗಿನಿಂದ ಹೈಕಮಾಂಡ್, ಬೆಳಗಾವಿಯ ನಾಯಕರು ನಿರಂತರ ಸಮಾಲೋಚನೆ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ವಾತಾವರಣ ಸರಿ ಇಲ್ಲ ಎಂಬುದು ಸುಳ್ಳು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ತಿಳಿಸುದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ರಾಜ್ಯದ 28ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.