ಹುಬ್ಬಳ್ಳಿ: ರಾಜ್ಯಕ್ಕೆ ಇನ್ನೂ ಎರಡು `ವಂದೇ ಭಾರತ್’ ದೊರಕಿವೆ. ಈಗಾಗಲೇ ಕೇರಳದ ತಿರುವಂತನಪುರ ಮತ್ತು ಕಾಸರಗೋಡು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ಅನ್ನು ಮಂಗಳೂರುವರೆಗೆ ವಿಸ್ತರಣೆ ಮಾಡಲಾಗಿದೆ. ಅಲ್ಲದೇ ಮೈಸೂರಿಗೆ ಇನ್ನೊಂದು ವಂದೇ ಭಾರತ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವಂದೇ ಭಾರತ್ ರೈಲುಗಳಿಗೆ ಮಾರ್ಚ್ ೧೨ರಂದು ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಲಿದ್ದಾರೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು..
ಹೊಸ ರೈಲುಗಳು ಕಲಬುರಗಿ-ಬೆಂಗಳೂರು ಮತ್ತು ಮೈಸೂರು- ಚೆನ್ನೈ ನಡುವೆ ಸಂಚರಿಸಲಿವೆ. ೧೨ರಂದು ಪ್ರಧಾನಿಯವರು ದೇಶದ ೬ ಸಾವಿರ ರೈಲ್ವೆ ಯೋಜನೆಗಳನ್ನು ಸಮರ್ಪಣೆ ಮಾಡಲಿದ್ದಾರೆ. ಈ ಪೈಕಿ ಕೆಲವು ಉದ್ಘಾಟನೆ ಹಾಗೂ ಇನ್ನುಳಿದ ಹಲವು ಶಂಕುಸ್ಥಾಪನೆಗೊಳ್ಳಲಿವೆ ಎಂದರು.