ಬೆಂಗಳೂರು: ನಾಗರಹೊಳೆ ಅರಣ್ಯದಲ್ಲಿ ಆನೆ ಮತ್ತು ಅದರ ಮರಿಗೆ ಬಾಲ ಮತ್ತು ಸೊಂಡಿಳಲ್ಲಿ ಗಾಯವಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು, ಈ ಬಗ್ಗೆ ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರಹೊಳೆ ಅರಣ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಗಮನಿಸಿದ್ದು, ಇನ್ನು ಅರ್ಧ ಗಂಟೆಯ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಬಳಿ ಮಾತನಾಡಿ ಆನೆಗಳಿಗೆ ಏನೆಲ್ಲಾ ಚಿಕಿತ್ಸೆ ನೀಡಬಹುದು ಎಂದು ಪರಿಶೀಲನೆ ಮಾಡಲಾಗುವುದು. ಅವರು ಗಮನಕ್ಕೆ ತಂದಿರುವ ವಿಷಯದ ಬಗ್ಗೆ ಸ್ಪಂದಿಸಲಾಗುವುದು ಹಾಗೂ ಮಾನವೀಯ ದೃಷ್ಟಿಯಿಂದ ಅದರ ಅಗತ್ಯವೂ ಇದೆ ಎಂದರು.