ಸಂಯುಕ್ತ ಕರ್ನಾಟಕ ಬಾಗಲಕೋಟೆ ಆವೃತ್ತಿಯ ಸಂಪಾದಕೀಯ ಮುಖ್ಯಸ್ಥ ರಾಮು ಮನಗೂಳಿ ಅವರದು ಭೂಮಿ ತೂಕದ ವ್ಯಕ್ತಿತ್ವ; ವೇಶವಿಲ್ಲ, ಆವೇಶವಂತೂ ಇಲ್ಲವೇ ಇಲ್ಲ, ಅವೇಶಕ್ಕಂತೂ ಜಾಗವೇ ಇಲ್ಲ, ಅಷ್ಟೇ ಏಕೆ ಆಕ್ರೋಶಕ್ಕೂ ಎಡೆಯಿಲ್ಲ; ಆದರೆ ಮೈಯೆಲ್ಲಾ ಸಾತ್ವಿಕ ಸಿಟ್ಟಿನ ಸ್ವಭಾವ. ಹೀಗಾಗಿಯೇ ಪತ್ರಕರ್ತರಾಗಿ ಸದಾಕಾಲ ಜನಮುಖಿ ಚಿಂತನೆಯನ್ನೇ ಮಾಡಿ ಬರಹದ ಮೂಲಕ ಅದನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಗ್ರಾಸವಾಗಿಸಿ ಸರ್ಕಾರದ ಕಣ್ಣುತೆರೆಸುವ ಜೊತೆಗೆ ಸಾರ್ವಜನಿಕ ಅಭಿಪ್ರಾಯ ಸ್ಫುಟವಾಗುವಂತೆ ಮಾಡುತ್ತಿದ್ದ ಅವರದು ನಿಜಕ್ಕೂ ದಣಿವರಿಯದ ಕಾಯಕ.
ಸಾಮಾಜಿಕವಾಗಿ ಕಂಡುಬರುವ ಏರುಪೇರುಗಳನ್ನು ಗುರುತಿಸಿ ಅದನ್ನು ಜತನವಾಗಿ ಜನ ವಾಣಿಯಂತೆ ಪತ್ರಿಕೆಯಲ್ಲಿ ಬಿಂಬಿಸಿ ಕವಿವಾಣಿ ರೂಪುಗೊಳ್ಳಲು ಕಾರಣವಾಗುತ್ತಿದ್ದ ರಾಮು ಮನಗೂಳಿ ಕೊನೆಯುಸಿರನ್ನು ಎಳೆದಿರುವುದು ಸಂಯುಕ್ತಕರ್ನಾಟಕ ಬಳಗಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ಆಗಿರುವ ತುಂಬಲಾರದ ನಷ್ಟ.
ಚಿರಸಾ ನಮಾಮಿ, ಮನಸಾ ಸ್ಮರಾಮಿ.
ಯು.ಬಿ.ವೆಂಕಟೇಶ್,
ಶಾಸಕರು ಹಾಗೂ ಅಧ್ಯಕ್ಷರು, ಲೋಕಶಿಕ್ಷಣ ಟ್ರಸ್ಟ್.