ಬೆಳಗಾವಿ: ನಗರದಲ್ಲಿ ಅನಗೋನಲ್ಲಿ ಮರಾಠಿ ಭಾಷೆಯಲ್ಲಿ ಅಳವಡಿಸಿದ್ದ ಜೈ ಮಹಾರಾಷ್ಟ್ರ ಫಲಕವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಗುರುವಾರ ಸಂಜೆ ತೆರವುಗೊಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್ ನಡುವೆ ಬೋರ್ಡ್ ತೆರವು ಮಾಡಿದ ಪಾಲಿಕೆ ಸಿಬ್ಬಂದಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ.
ಬೋರ್ಡ್ ತೆರವುಗೊಳಿಸುವಂತೆ ಒತ್ತಾಯಿಸಿದ್ದ ಕರುನಾಡು ವಿಜಯಸೇನೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಅನಿಲ ದಡ್ಡಿಮನಿ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಮತ್ತೊಂದೆಡೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಅನಗೋಳ ಚಲೋ ಕಾರ್ಯಕ್ರಮ ಮಾಡುವ ಎಚ್ಚರಿಕೆ ಕೂಡ ನೀಡಲಾಗಿತ್ತು.
ಈ ಎಲ್ಲ ಕನ್ನಡಪರ ಹೋರಾಟಗಾರರ ಹೋರಾಟಕ್ಕೆ ಮಣಿದು, ಪಾಲಿಕೆ ಆಯುಕ್ತ ಲೋಕೇಶ್ ಅವರ ಸೂಚನೆ ಮೇರೆಗೆ ಬೋರ್ಡ್ ತೆರವು ಮಾಡಲಾಗಿದೆ.