ಭಾರತದಲ್ಲಿ ಸಂವಿಧಾನವೂ ಸುಭದ್ರ: ಕೋಟ

ಕೋಟ ಶ್ರೀನಿವಾಸ ಪೂಜಾರಿ
Advertisement

ಕಾರವಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ, ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ನಗರದಲ್ಲಿ ಶನಿವಾರ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿ ಕಾಲಿಟ್ಟ ಈ ನೆಲದಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷ ಮಾಡುತ್ತಾ ಮೆರವಣಿಗೆ ಮಾಡುವುದೇ ಒಂದು ಹರುಷ ಉಂಟುಮಾಡುವ ಸುಂದರ ಕ್ಷಣವಾಗಿದೆ ಎಂದರು.
ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಪ್ರಜಾಪ್ರಭುತ್ವ ಹಿನ್ನಡೆ ಕಾಣುತ್ತಿದೆ. ಆದರೆ, ಭಾರತದಲ್ಲಿ ಸಂವಿಧಾನವೂ ಸುಭದ್ರವಾಗಿದೆ. ದೇಶವೇ ನನಗಿಂತ ಮೊದಲು ಎಂಬ ಧೋರಣೆಯಿರುವ ಪ್ರಜೆಗಳಿಂದ ದೇಶದ ಭವಿಷ್ಯ ಮತ್ತಷ್ಟು ಭದ್ರವಾಗಿದೆ ಎಂದು ಹೇಳಿದರು.
ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಎಂ.ಜಿ.ರಸ್ತೆಯಿಂದ ಹೊರಟ ಮೆರವಣಿಗೆಯು ಅಂಬೇಡ್ಕರ್ ವೃತ್ತ, ಗ್ರೀನ್‌ಸ್ಟ್ರೀಟ್, ಸುಭಾಸ್ ವೃತ್ತ, ರಾಷ್ಟ್ರೀಯ ಹೆದ್ದಾರಿ ೬೬ರ ಫ್ಲೈ ಓವರ್ ಮೇಲೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂದು ಸಮಾಪ್ತಗೊಂಡಿತು. ಮೆರವಣಿಗೆಯಲ್ಲಿ ನಗರದ ವಿವಿಧ ಶಾಲೆ,ಕಾಲೇಜುಗಳ ಸಾವಿರಾರು ಮಕ್ಕಳು ಭಾಗವಹಿಸಿದ್ದರು.

ಕೋಟ ಶ್ರೀನಿವಾಸ ಪೂಜಾರಿ