ಭಟ್ಕಳ: ಕಳೆದ ಆ. ೨ರಂದು ಬೆಳಗಿನ ಜಾವ ಗುಡ್ಡಕುಸಿದು ನಾಲ್ವರನ್ನು ಬಲಿತೆದುಕೊಂಡಿದ್ದ ತಾಲೂಕಿನ ಮುಟ್ಟಳ್ಳಿಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ, ಗಣಿ ಮತ್ತು ಭೂವಿಜ್ಞಾನಿಗಳ ತಂಡದ ಸದಸ್ಯರು ಭೇಟಿ ನೀಡಿ ಭೂಕುಸಿತವಾದ ಪ್ರದೇಶ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿದರು.
ಗುಡ್ಡಕುಸಿತವಾದ ಪ್ರದೇಶದಲ್ಲಿ ಸ್ವಲ್ಪ ಮೇಲ್ಬಾಗದಲ್ಲಿ ಸಂಪರ್ಕ ರಸ್ತೆಯಿದ್ದು ಇದು ಸಂಪೂರ್ಣ ಅಪಾಯಕಾರಿಯಾಗಿದೆ ಎಂದ ಅವರು, ಗುಡ್ಡ ಕುಸಿತವುಂಟಾದ ಮನೆಗಳ ಅಕ್ಕ ಪಕ್ಕದಲ್ಲಿರುವ ಎಲ್ಲಾ ಮನೆಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಈ ಭಾಗದಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿತವಾಗಿರುವುದರಿಂದ ಮುಂದೆ ಇನ್ನಷ್ಟು ಕುಸಿಯುವ ಭೀತಿ ಇದೆ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ವಾಸ್ತವ್ಯ ಮಾಡುವುದು ಕ್ಷೇಮಕರವಲ್ಲ. ಕೆಲವು ದಿನಗಳಲ್ಲಿ ಈ ಬಗ್ಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಸ್ಥಳದ ಪ್ರಾಥಮಿಕ ಸರ್ವೆಗಾಗಿ ಬಂದ ಜಿಯಾಲೋಜಿಕಲ್ ಸರ್ವೆ ಆಫ್ ಇಂಡಿಯಾದ (ಭೂ ವೈಜ್ಞಾನಿಕ ಸಮೀಕ್ಷಾ) ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಬಂದ ಭೂ ವಿಜ್ಞಾನಿಗಳು ಉಪಸ್ಥಿತರಿದ್ದರು.