ಯುವಕ ತೆರೆದಿಟ್ಟ ಮತಾಂತರ ವೃತ್ತಾಂತ

ಮತಾಂತರ
Advertisement

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿ ಭೇಟಿಯಾಗಲು ಬಂದು ಬೈರಿದೇವರಕೊಪ್ಪದಲ್ಲಿ ಅಪರಿಚಿತರಿಂದ ಹಲ್ಲೆಗೊಳಗಾದ ಮಂಡ್ಯ ಮೂಲದ ಯುವಕ ತನ್ನನ್ನು ಮತಾಂತರಕ್ಕೆ ಒಳಪಡಿಸಿ ಬಂಧನದಲ್ಲಿಟ್ಟುಕೊಂಡಿದ್ದಾಗಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಡವನಹಳ್ಳಿಯ ಶ್ರೀಧರ್ ಜಿ(26) ಎಂಬಾತ ಪ್ರಕರಣ ದಾಖಲಿಸಿದ್ದಾನೆ. ಮತಾಂತರ ಮಾಡಿದ್ದ ಆರೋಪದ ಮೇಲೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರು ಮೂಲದ ಅಜಿಸ್ ಸಾಬ್, ನಯಾಜ್ ಪಾಶಾ, ನದೀಂ ಖಾನ್, ಅನ್ಸರ್ ಪಾಶಾ, ಸೈಯದ್ ದಸ್ತಗೀರ ಫಿರಾನ್, ಮಹ್ಮದ್ ಇಕ್ಬಾಲ್, ರಫೀಕ್, ಶಬ್ಬೀರ್, ಖಾಲೀದ್, ಶಕೀಲ್ ಮತ್ತು ಅಲ್ತಾಫ್ ಎಂಬುವರ ವಿರುದ್ಧ ಆರೋಪಿಸಿದ್ದಾನೆ.