ಪಿಎಫ್‌ಐ ಮುಖಂಡರ ಮೇಲೆ ಎನ್‌ಐಎ ದಾಳಿ ಖಂಡಿಸಿ ಇಂದು ಕರೆ ನೀಡಿದ್ದ ಕೇರಳ ಬಂದ್ ಹಿಂಸಾಚಾರಕ್ಕೆ ತಿರುಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಸರ್ಕಾರಿ ಬಸ್, ಆಟೋ ಸೇರಿದಂತೆ ವಾಹನಗಳ ಮೇಲೆ ಕಲ್ಲೂ ತೂರಾಟ ಮಾಡಲಾಗಿದೆ. ಕೊಲ್ಲಂನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕನ್ನೂರಿನ ಮಟ್ಟನ್ನೂರ್ ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಅಲ್ಲದೇ ತೆರದಿದ್ದ ಕೆಲ ಅಂಗಡಿ ಮೇಲೆ ಪಿಎಫ್‌ಐ ಕಾರ್ಯಕರ್ತರು ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ.
ಪಿಎಫ್‌ಐ ಮುಖಂಡರ ಮೇಲೆ ಗುರುವಾರ ನಡೆದ ಎನ್‌ಐಎ ದಾಳಿ ಖಂಡಿಸಿ ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಕೇರಳ ಬಂದ್‌ಗೆ ಕರೆ ನೀಡಲಾಗಿತ್ತು.