ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಗುರುವಾರ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ೯೦ ಪೈಸೆಯಷ್ಟು ತೀವ್ರ ಇಳಿಕೆ ಕಂಡು ೮೦.೮೬ ರೂ.ಗಳಲ್ಲಿ ವ್ಯವಹಾರ ಮುಗಿಸಿದೆ. ಫೆಬ್ರವರಿ ೨೪ರ ನಂತರ ರೂಪಾಯಿ ಮೌಲ್ಯ ಇಷ್ಟೊಂದು ಪ್ರಮಾಣದಲ್ಲಿ ಕುಸಿದಿರುವುದು ಇದೇ ಮೊದಲು. ಬುಧವಾರ ರೂಪಾಯಿ ೭೯.೯೭ರಲ್ಲಿತ್ತು. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಹೆಚ್ಚಿಸಿರಿಂದ ಡಾಲರ್ ಮೌಲ್ಯ ಹೆಚ್ಚಾಗಿ ರೂಪಾಯಿ ವ್ಯವಹಾರಕ್ಕೆ ಹೊಡೆತ ಬಿದ್ದಿದೆ.