ಬಂಧಿತರಾಗಿರುವ 5 ಮಂದಿ ಪಿಎಫ್ಐ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚೇರಿ ಬೀ ತುಂಡರಿಸಿ ಕಚೇರಿಯ ಅಗ್ರಿಮೆಂಟ್ ಕಾಪಿ, ಎಸ್ಡಿಪಿಐ ಕಾರ್ಯಕ್ರಮದ ಫೈಲ್, ಫೋಟೋ, ಲ್ಯಾಪ್ಟಾಪ್, 2 ಹಾರ್ಡ್ ಡಿಸ್ಕ್, ಎರಡು ಬುಕ್ ಲೆಟ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ನುರಿತ ವಕೀಲರ ಮೂಲಕ ಕಾನೂನು ಹೋರಾಟ ಮಾಡಲಾಗುವುದು ಎಂದರು.