ಮುನಿಸ್ವಾಮಿ ಭವಿಷ್ಯ: ರಾಜ್ಯ ಸರ್ಕಾರದ ಆಯುಷ್ಯ ಮೂರೇ ತಿಂಗಳು

Advertisement

ಕೋಲಾರ: ಕಾಂಗ್ರೆಸ್‌ ಸರ್ಕಾರ ಇನ್ನೂ ಮೂರೇ ತಿಂಗಳು ಇರೋದು ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.
‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ ಸರ್ಕಾರ ಇನ್ನೂ ಮೂರೇ ತಿಂಗಳು ಇರೋದು, ಆಮೇಲೆ ಸರ್ಕಾರ ಇರಲ್ಲ, ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ, ಶಾಸಕರಿಗೆ ಅನುದಾನ ಸಿಗುತ್ತಿಲ್ಲ, ಈಗಾಗಲೇ ಒಬ್ಬೊಬ್ಬರೇ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೂರಾರು ಕೋಟಿ ಗುಳುಂ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ, ಇಂತಹ ಆರೋಪಗಳು ಪ್ರತಿ ಸಚಿವರ ವಿರುದ್ದವೂ ಕೇಳಿ ಬರುತ್ತಿದೆ. ಹೀಗಾಗಿ ಇನ್ನು ಮೂರೇ ತಿಂಗಳಲ್ಲಿ ಖತಂ ಆಗುತ್ತದೆ, ಜೊತೆಗೆ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಿಗೆ 28 ಸ್ಥಾನಗಳನ್ನ ಬಿಜೆಪಿ ಗೆಲ್ಲುತ್ತದೆ ಎಂದರು, ಸಂಸದ ಮುನಿಸ್ವಾಮಿ ಯಾರು ಎಂದು ಪ್ರಶ್ನಿಸಿದ ಕೋಲಾರ ಜಿಲ್ಲಾ ಉಸ್ತುವಾರಿಗೆ ಪ್ರತಿಕ್ರಿಯೆ ನೀಡಿರುವ ಮುನಿಸ್ವಾಮಿ, ನನ್ನದು ಭಾರತ ಸಂಸ್ಕೃತಿ, ಹಿಂದು ಧರ್ಮದವನು. ಕಾಂಗ್ರೆಸ್ಸಿಗರಂತೆ ಇಟಲಿ ಸಂಸ್ಕೃತಿ ನನ್ನದಲ್ಲ, ಪ್ರಿಯಾಂಕ ವಾದ್ರ ಸಂಸ್ಕೃತಿಯೂ ಅಲ್ಲ. ಇನ್ನು ಡಿಕೆಶಿ ಪ್ರಕರಣ ಕುರಿತಂತೆ ಸಿಬಿಐನಿಂದ ಇವರು ವಾಪಸ್‌ ಪಡೆಯಲು ಇವರೇನು ಕಾನೂನಿನ ಮುಂದೆ ಸುಪ್ರೀಂ ಅಲ್ಲ, ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಅವರು ತನಿಖೆ ನಡೆಸೇ ನಡೆಸುತ್ತಾರೆ ಎಂದರು.