ಅಪಘಾತ ತಡೆಗೆ ಬಿಎಂಟಿಸಿ ಬಸ್‌ಗಳಿಗೆ ಹೈಟೆಕ್‌ ತಂತ್ರಜ್ಞಾನ ಅಳವಡಿಕೆ

Advertisement

ಬೆಂಗಳೂರು: ಬಿಎಂಟಿಸಿ ಬಸ್‌ಗಳಿಂದಾಗುವ ಅಪಘಾತ ತಡೆಗಾಗಿ ಅಡ್ವಾನ್ಸ್ಡ್‌ ಡ್ರೈವರ್ ಅಸಿಸ್ಟೆನ್ಸ್‌ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬಸ್‌ ಚಾಲಕರ ತಪ್ಪಿಲ್ಲದಿದ್ದರೂ ಬಿಎಂಟಿಸಿ ಮೇಲೆ ಆರೋಪ ಮಾಡಲಾಗುತ್ತದೆ. ಅಲ್ಲದೆ, ಬಿಎಂಟಿಸಿ ಚಾಲಕರೂ ಅತಿ ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಬಸ್‌ಗಳನ್ನು ಅಪಘಾತಕ್ಕೀಡು ಮಾಡುತ್ತಿರುವ ಪ್ರಕರಣಗಳೂ ಗಮನಕ್ಕೆ ಬಂದಿದೆ. ಹೀಗಾಗಿ ಚಾಲಕರನ್ನು ಎಚ್ಚರಿಸಿ ಅಪಘಾತ ತಡೆಯುವ ಸಲುವಾಗಿ ಹೈಟೆಕ್‌ ಕಾರುಗಳಲ್ಲಿ ಇರುವಂತೆ ಬಸ್‌ಗಳಿಗೆ ಅಡ್ವಾನ್ಸ್ಡ್‌ ಡ್ರೈವರ್ ಅಸಿಸ್ಟೆನ್ಸ್‌ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಾಯೋಗಿಕವಾಗಿ 10 ಬಸ್‌ಗಳಿಗೆ ನೂತನ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲಿ ಎಲ್ಲ 5 ಸಾವಿರ ಬಸ್‌ಗಳಿಗೂ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.