ಸಿಎಂ ಜನತಾ ದರ್ಶನ: ಸ್ಥಳದಲ್ಲಿಯೇ ಪರಿಹಾರ

Advertisement

ಬೆಂಗಳೂರು: ಮೊದಲ ಬಾರಿ ಪೂರ್ಣಾವಧಿ ಜನತಾ ದರ್ಶನ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಾವಿರಾರು ಜನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಜನತಾ ದರ್ಶನಕ್ಕಾಗಿ ವಿಶೇಷ ಚೇತನರು, ಹಿರಿಯ ನಾಗರಿಕರು ಸೇರಿದಂತೆ 20 ಕೌಂಟರ್​ಗಳನ್ನ ಮಾಡಲಾಗಿದ್ದು, 1000ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ. ಮುಂಜಾನೆ ಆರಂಭವಾದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾವಿರಾರು ಜನ ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಕೆಲವು ಸಮಸ್ಯೆಗಳಿಗೆ ಸಿಎಂ ಸ್ಥಳದಲ್ಲಿಯೇ ಪರಿಹಾರ ನೀಡಿದರು. ಕೆಲ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಖಡಕ್‌ ಸೂಚನೆ ನೀಡಿದರು.