ಮಾಜಿ ಸಿಎಂ ಆಶೀರ್ವಾದ ಪಡೆದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

Advertisement

ಬೆಂಗಳೂರು: ಇದೇ ತಿಂಗಳ 23ರಂದು ದೆಹಲಿಗೆ ತೆರಳಿ ಚರ್ಚೆ ವಿರೋಧ ಪಕ್ಷದ ನಾಯಕರ ಆಯ್ಕೆ ಕುರಿತು ಚರ್ಚೆ ನಡೆಸುತ್ತೇನೆಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಆರ್‌ಟಿ ನಗರದಲ್ಲಿರುವ ಬೊಮ್ಮಾಯಿಯವರ ನಿವಾಸಕ್ಕೆ ತೆರಳಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ವಿಜಯೇಂದ್ರ ಅವರು ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆಯೇ ಬೊಮ್ಮಾಯಿಯವರು ಹಾರ ಹಾಗೂ ಶಾಲು ಹೊದಿಸಿ, ಸ್ವಾಗತ ಕೋರಿದರು.
ವಿಶ್ರಾಂತಿಯಲ್ಲಿರುವ ತಾವು ಶೀಘ್ರವಾಗಿ ಚೇತರಿಸಿಕೊಂಡು ಪಕ್ಷ ಸಂಘಟನೆಗೆ ಸಕ್ರಿಯರಾಗಲೆಂದು ಬಿವೈ ವಿಜಯೇಂದ್ರ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕ ಎಂ ಕೃಷ್ಣಪ್ಪನವರು, ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರು ಉಪಸ್ಥಿತರಿದ್ದರು.