ಜಿಲ್ಲೆಯಲ್ಲಿ ಎರಡು ಬಾರಿ ಲಘು ಭೂಕಂಪ

Advertisement

ಬೀದರ್: ಜಿಲ್ಲೆಯ ಹುಮನಾಬಾದ ತಾಲ್ಲೂಕು ಒಡ್ಡನಕೆರ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಎರಡು ಬಾರಿ ಲಘು ಭೂಕಂಪ ಸಂಭವಿಸಿತು.
ಮೊದಲ ಭೂಕಂಪ ನಸುಕಿನಲ್ಲಿ 4.22 ಕ್ಕೆ ಮತ್ತು ಎರಡನೇ ಭೂಕಂಪ ಬೆಳಿಗ್ಗೆ 6.04 ಗಂಟೆಗೆ ಸಂಭವಿಸಿತು. ಭೂಕಂಪದ ತಿವ್ರತೆ ರಿಕ್ಟರ್ ಮಾಪನದ ಮೇಲೆ ಕ್ರಮವಾಗಿ 1.9 ಮತ್ತು 2.1 ರಷ್ಟು ದಯಾಖಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಭೂಕಂಪದ ತಿವ್ರತೆ ದುರ್ಬಲವಾಗಿದ್ದು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.