ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

Advertisement

ಉಡುಪಿ: ಪೇಜಾವರ ಮಠದ ಮಠಾಧಿಪತಿಗಳಾದ ಶ್ರೀ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ಅಂಗಡಿಮಾರು ಕೃಷ್ಣಭಟ್ಟ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ಆಗಿತ್ತು.
ಶ್ರೀಗಳ ಪೂರ್ವಾಶ್ರಮದ ತಂದೆಯವರಾದ ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ವಯೋಸಹಜವಾದ ಆರೋಗ್ಯ ಸಮಸ್ಯೆಗಳಿದ್ದವು.
ಇಂದು ಚಿಕಿತ್ಸೆ ಫಲಿಸದೇ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃ ಕೃಷ್ಣ ಭಟ್ಟರು. ಇವರು ಐವರು ಪುತ್ರರು, ಆರು ಪುತ್ರಿಯರು ಸೇರಿ ಬಂಧು ಬಳಗವನ್ನು ಅಗಲಿದ್ದಾರೆ.