ಚಿಕ್ಕಮಗಳೂರು: ಹುಲಿ ಉಗುರು, ಚರ್ಮ ಕಾರ್ಯಾಚರಣೆ ಚಿತ್ರ ನಟರು, ಸ್ವಾಮೀಜಿಗಳು ಸೇರಿದಂತೆ ರಾಜಕಾರಣಿಗಳ ಸುತ್ತಲೂ ಸುತ್ತಿದ್ದು ಇದೀಗ ಚಿಕ್ಕಮಗಳೂರಿನ ದತ್ತಪೀಠದ ಶಾಖಾದ್ರಿಯೂ ಹುಲಿ ಚರ್ಮದ ಮೇಲೆ ಕೂತಿರೋ ಫೋಟೊ ವೈರಲ್ ಆಗಿದೆ. ಶಾಖಾದ್ರಿ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕ ಅರಣ್ಯ ಇಲಾಖೆಗೆ ದೂರು ನೀಡಲು ಮುಂದಾಗಿದೆ. ದತ್ತಪೀಠದಲ್ಲಿ ವಾಸವಿರೋ ಶಾಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ ಅವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಎಫ್.ಓ.ಗೆ ಶ್ರೀರಾಮ ಸೇನೆ ಮನವಿ ಮಾಡುವ ನಿರ್ಧಾರ ಮಾಡಿದೆ ಎನ್ನಲಾಗಿದೆ.