ಕುನೋ : ಪ್ರಧಾನಿ ಮೋದಿ ಮಧ್ಯಪ್ರದೇಶದ ಕುನೋ ಉದ್ಯಾನಕ್ಕೆ ನಮೀಬಿಯಾ ಚೀತಾಗಳನ್ನು ಬಿಟ್ಟಿದ್ಧಾರೆ. ಇಂದು ಮುಂಜಾನೆ ನಮೀಬಿಯಾದಿಂದ ಏರ್ಲಿಫ್ಟ್ ಆಗಿತ್ತು. ಗ್ವಾಲಿರ್ಗೆ ತಂದು ಅಲ್ಲಿಂದ ಸೇನಾ ಕಾಪ್ಟರ್ನಲ್ಲಿ ತರಲಾಗಿತ್ತು.
ಎಂಟು ಚೀತಾಗಳನ್ನು ಮಧ್ಯಪ್ರದೇಶ ಕಾಡಿಗೆ ತಂದು ಬಿಡಲಾಗಿದೆ. ಮೋದಿ ಅವರು ಖುದ್ದು ಬೋನ್ ಓಪನ್ ಮಾಡಿ ಚೀತಾಗಳನ್ನು ಬಿಟ್ಟಿದ್ಧಾರೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತಿತರರು ಸಾಥ್ ನೀಡಿದ್ಧಾರೆ. ಮೋದಿ 5 ವರ್ಷದ ಮೂರು ಚೀತಾಗಳನ್ನು ಕಾಡಿಗೆ ಬಿಟ್ಟಿದ್ಧಾರೆ. ಬರ್ತಡೇ ಗಿಫ್ಟ್ ಮಾದರಿಯಲ್ಲಿ ದೇಶಕ್ಕೆ ಅಪರೂಪದ ಚೀತಾ ಅರ್ಪಣೆ ನೀಡಿದ್ಧಾರೆ. 70 ವರ್ಷಗಳ ನಂತರ ಭಾರತದಲ್ಲಿ ಚೀತಾ ಸಂತತಿ ಕಾಣಿಸಿಕೊಳ್ಳುತ್ತಿದೆ.