ಪೊರಕೆ ಹಿಡಿದು ರೈಲ್ವೆ ನಿಲ್ದಾಣ ಕ್ಲೀನ್​ ಮಾಡಿದ ಸಚಿವರು..

Advertisement

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ಬಿಜೆಪಿ ವಿಶಿಷ್ಟವಾಗಿ ಆಚರಣೆ ಮಾಡುತ್ತಿದೆ. ಇಂದಿನಿಂದ ಅಕ್ಟೋಬರ್​​​ 2ರ ಗಾಂಧೀ ಜಯಂತಿವರೆಗೂ ಸೇವಾ ಪಕ್ವಾರಾ ಹೆಸರಿನಲ್ಲಿ ಸೇವಾ ಅಭಿಯಾನ ಹಮ್ಮಿಕೊಂಡಿದೆ.

ದೇಶದ ನಾನಾ ಭಾಗಗಳಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇನ್ನು ಹೈದ್ರಾಬಾದ್​ನಲ್ಲಿರುವ ಅಮಿತ್​​ಶಾ ಹೈದ್ರಾಬಾದ್​ ಡೇನಲ್ಲಿ ಭಾಗವಹಿಸಿ ಆನಂತರ ಮೋದಿ ಬರ್ತಡೇ ಅಂಗವಾಗಿ ಕ್ಲೀನ್​​​ ಕರಾವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.