ದೇವರಿಗೆ ರೂಪ ಕೊಟ್ಟವರು ವಿಶ್ವಕರ್ಮರು

ಬೊಮ್ಮಾಯಿ
Advertisement

ಬೆಂಗಳೂರು: ವಿಶ್ವಕರ್ಮರ ಅಭಿವೃದ್ಧಿಗೆ ಪ್ರಧಾನಮಂತ್ರಿಗಳು 18 ಕಾಯಕಗಳಿಗೆ ಸಾಲ ನೀಡುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ ಅದರ ಸದುಪಯೋಗಪಡೆಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಶ್ವಕರ್ಮ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ವಿರಾಟ ವಿಶ್ವಕರ್ಮ ಮಹೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಮನುಷ್ಯನ ನಾಗರಿಕತೆ ಸೃಷ್ಟಿ ಮಾಡಿದವರು ವಿಶ್ವಕರ್ಮರು. ಮನಷ್ಯ ಒಂಟಿ ಜೀವಿಯಾಗಿದ್ದ. ಆಹಾರದಿಂದ ಹಿಡಿದು ಕಾಯಕದವರೆಗೂ ಮನುಷ್ಯನ ಪರಿವರ್ತನೆಯವರೆಗೂ ವಿಶ್ವ ಕರ್ಮರು ಕೊಡಿಗೆ ನೀಡಿದ್ದಾರೆ. ಇಡೀ ವಿಶ್ವದಲ್ಲಿ ವಿಶ್ವಕರ್ಮರು ಇದ್ದಾರೆ. ವಿಶ್ವಕರ್ಮರು ದೇವರ ಮೂರ್ತಿ ಮಾಡದೇ ಇದ್ದರೆ, ದೇವರ ರೂಪವೇ ಇರುತ್ತಿರಲಿಲ್ಲ. ದೇವರಿಗೆ ಕಲ್ಪನಾತೀತವಾದ ಆಕಾರ ಕೊಡುವ ಕೆಲಸ ವಿಶ್ವಕರ್ಮರು ಮಾಡಿದ್ದಾರೆ. ದೇವರನ್ನು ಸಮಾಜಕ್ಕೆ ಸೃಷ್ಟಿ ಮಾಡಿಕೊಡುವ ಕೆಲಸವನ್ನು ವಿಶ್ವಕರ್ಮರು ಮಾಡುತ್ತಾರೆ. ವಿಶ್ವಕರ್ಮರನ್ನು ಸಮಾಜದ ಕೆಳ ಮಟ್ಟದಲ್ಲಿ ಇಟ್ಟಿದ್ದೇವೆ. ಅವರನ್ನು ಮೇಲೆ ಇಡಬೇಕು ಎಂದರು.
ಯಾವ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಬೆಲೆ ಇಲ್ಲವೋ ಆ ದೇಶಕ್ಕ ಗೌರವ ಇಲ್ಲ. ವಿಶ್ವಕರ್ಮರಿಗೆ ಕಲೆ ಭಗವಂತ ಕೊಟ್ಟ ವರ. ಬಂಗಾರದ ಗುಣ ಗುರುತಿಸುವ ಕಲೆ ಇರುವುದು ವಿಶ್ವಕರ್ಮರಿಗೆ ಮಾತ್ರ. ವಿಶ್ವಕರ್ಮರಿಗೆ ಸಾಕಷ್ಟು ಕಲೆ ಗೊತ್ತಿದ್ದರೂ ಅದನ್ನು ಹೇಳಿಕೊಳ್ಳುವುದಿಲ್ಲ. ನಿಮ್ಮ ಕಲೆಯ ಬಗ್ಗೆ ಕೌಶಲ್ಯದ ಬಗ್ಗೆ ಹೇಳಿಕೊಳ್ಳಬೇಕು. ವಿಶ್ವಕರ್ಮ ಸಮುದಾಯದವರು ಐಎಎಸ್, ಐಪಿಎಸ್ ಅಧಿಕಾರಿಗಳು ಆಗಬೇಕು ಎಂದರು.
ನಾನು ನನ್ನ ಬಜೆಟ್‌ನಲ್ಲಿ ಸುಮಾರು ಐವತ್ತು ಕಸುಬುಗಳಿಗೆ ಸುಮಾರು ಐವತ್ತು ಸಾವಿರ ರೂ. ವರೆಗೆ ಸಾಲ ನೀಡುವ ಯೋಜನೆ ಜಾರಿಗೆ ತಂದಿದ್ದೆ. ಬಹಳಷ್ಟು ಜನರು ಶ್ರೀಮಂತರು ಮಾತ್ರ ಆರ್ಥಿಕತೆ ಬೆಳೆಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಕೆಳ ಹಂತದ ಕಾರ್ಮಿಕರು ಕೆಲಸ ಮಾಡಿದಾಗ ಮಾತ್ರ ಆರ್ಥಿಕತೆ ಬೆಳೆಯುತ್ತದೆ. ವಿಶ್ವಕರ್ಮರು ಕಾಯಕ ನಂಬಿದ ಸಮುದಾಯ, ಭೂಮಂಡಲ‌ ಇರುವವರೆಗೆ ವಿಶ್ವಕರ್ಮರ ಕೆಲಸ ಜೀವಂತವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ವಿಶ್ವಕರ್ಮ ಸಮುದಾಯದ ಶಿವ ಸಜ್ಜನ ಮಹಾಸ್ವಾಮಿ, ವಿರೇಂದ್ರ ಸ್ವಾಮೀಜಿಗಳು ಹಾಗೂ ಮತ್ತಿತರರು ಹಾಜರಿದ್ದರು.