ಶಾಲಾ ವಾಹನ ಚಲಾಯಿಸಿದ ರಾಜಶೇಖರ್ ಹಿಟ್ನಾಳ್: ವಿಡೀಯೋ ವೈರಲ್

Advertisement

ಕೊಪ್ಪಳ: ಶಾಲಾ ವಾಹನವನ್ನು ಚಲಾಯಿಸಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್ ವಿಡೀಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ ಹಿಟ್ನಾಳ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಕೇವಲ ೩೦ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿ ಸ್ಪರ್ಧಿಸಲು ಉತ್ಸುಕರಾಗಿರುವ ರಾಜಶೇಖರ್ ಸದ್ಯ ಶಾಲಾ ಮಕ್ಕಳ ವಾಹನ ಚಲಾಯಿಸುವ ಮೂಲಕ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದಾರೆ.
ತಾಲ್ಲೂಕಿನ ಹಿಟ್ನಾಳ್ ಗ್ರಾಮದಲ್ಲಿರುವ ತಮ್ಮದೇ ನೇತಾಜಿ ಶಾಲೆಯ ವಾಹನವನ್ನು ಉದ್ಘಾಟಿಸಿ, ಮಕ್ಕಳನ್ನು ಕೂರಿಸಿಕೊಂಡು ಕೆ.ರಾಜಶೇಖರ್ ವಾಹನ ಚಲಾಯಿಸುತ್ತಿದ್ದರು. ಇದನ್ನು ಅವರ ಪತ್ನಿ ರಶ್ಮಿ ಹಿಟ್ನಾಳ್ ಚಿತ್ರೀಕರಣ ಮಾಡಿದ್ದು, ಬೆಂಬಲಿಗರು, ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.