ಬೆಂಗಳೂರು: ಯುವ ಸಾಹಿತಿ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಪ್ರಪ್ರಥಮ ಬಾರಿಗೆ ಮುಂಬರುವ ಅ. ೨೨,೨೩ ರಂದು ಎರಡು ದಿನಗಳ ಕಾಲ ‘ಹೊಯ್ಸಳ ಸಾಹಿತ್ಯೋತ್ಸವ’ ನಡೆಸಲಾಗುತ್ತದೆ ಎಂದು ಹೊಯ್ಸಳ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷ ಎಚ್.ಎಸ್.ವೆಂಕಟೇಶ್ಮೂರ್ತಿ ಅವರು ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಸಾಹಿತ್ಯೋತ್ಸವ ಏರ್ಪಡಿಸಲು ನಿರ್ಧರಿಸಿದ್ದು, ಸುಮಾರು ಐನೂರು ಸಾಹಿತಿಗಳಿಗೆ ಭಾಗವಹಿಸಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯೋತ್ಸವದಲ್ಲಿ ವಿವಿಧ ಗೋಷ್ಠಿ, ಉಪನ್ಯಾಸಗಳು ನಡೆಯಲಿದ್ದು, ಜಯಂತ್ ಕಾಯ್ಕಿಣಿ, ಟಿ.ಎನ್.ಸೀತಾರಾಂ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಸಲು ಇಚ್ಛಿಸುವ ಸಾಹಿತ್ಯಾಸಕ್ತರು, ಕವಿ, ಬರಹಗಾರರು ತಲಾ ೨೫೦ ರೂ.ಗಳನ್ನು ಪಾವತಿಸಿ ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ೯೧೦೮೮೪೭೪೮೦ ಹಾಗೂ ೯೪೪೮೭೯೩೧೭೭ ಕ್ಕೆ ಕರೆ ಮಾಡಬುದಾಗಿದೆ. ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ.ಬಿ.ಆರ್.ಲಕ್ಷ್ಮಣರಾವ್, ಜಾನಪದ ತಜ್ಞ ಹೆಚ್.ಎಲ್.ಮಹೇಶ್ಗೌಡ ಹಾಜರಿದ್ದರು.