ಭೋಗವೇ ಜೀವನವಲ್ಲ

PRATHAPPHOTOS.COM
Advertisement

ವಿಷಯ ಭೋಗಗಳಲ್ಲಿ ಆಗಬಾರದು. ಇವುಗಳೆಲ್ಲ ಅಶಾಶ್ವತ, ನಶ್ವರ ಎಂಬುದಾಗಿ ತಿಳಿಯಬೇಕು. ಜೀವನಕ್ಕಾಗಿ ಬದುಕಿಗಾಗಿ ಎಷ್ಟು ಬೇಕೋ ಅಷ್ಟನ್ನು ಅವಶ್ಯವಾಗಿ ಭೋಗ ಮಾಡಬಹುದು. ಅದಕ್ಕಿಂತ ಹೆಚ್ಚು ತಾನು ವಿಶೇಷಯಾಸಕ್ತಿಯನ್ನು ಪಡೆಯುವುದರಲ್ಲಿ ಅರ್ಥವಿಲ್ಲ. ಹೇಗೆ ಎಷ್ಟು ಹಸಿವಿರುತ್ತದೆ ಅಷ್ಟೇ ಊಟ ಮಾಡಿದ್ರೆ ಆರೋಗ್ಯಕ್ಕೆ ಹಿತವೋ ಅದಕ್ಕೂ ಹೆಚ್ಚು ಊಟ ಮಾಡಿದರೆ ರೋಗಕ್ಕೆ ಕಾರಣ ಹೇಗೆ ಆಗುತ್ತದೆಯೂ ಹಾಗೇ ಅಗತ್ಯಕ್ಕಿಂತ ಹೆಚ್ಚಿನ ಭೋಗವೂ ಕೂಡ ಸಾಧನಾ ಪಥಕ್ಕೆ ಅಡಚಣೆಯೇ ಆಗುತ್ತದೆ.
ಸಾಧನೆಗೆ ಶರೀರ ಅತ್ಯುತ್ತಮ ಮಾಧ್ಯಮವಾಗಿದೆ. ಈ ವಿಶ್ವದಲ್ಲಿ ಹುಟ್ಟಿದ ಎಲ್ಲ ಜೀವಿಗಳಿಗೂ ಕೂಡ ಸಾಧನೆ ಮಾಡಲು ಅವಕಾಶ ಕಲ್ಪಿಸಿಲ್ಲ. ಆದರೆ ಮನುಷ್ಯನಿಗೆ ಸಾಧನೆಗೆ ಅವಕಾಶಗಳಿವೆ. ಆತ್ಮಕ್ಕೆ ಅಂತದ್ದೊಂದು ಸದ್ಗತಿಯೆಡೆಗೆ ಸಾಗುವ ಅತ್ಯಂತ ಸೂಕ್ತವಾದ ಕಾಯವನ್ನು ನೀಡಿದ್ದಾನೆ. ವೈಚಾರಿಕ ಶಕ್ತಿ ಇದೆ. ಭಾಷೆ ಇದೆ. ಐಂದ್ರಿಕ ಶಕ್ತಿಗಳು ಸಾಧನೆಗೆ ತೊಡಕಾಗಿಸದೇ ನಿಯಂತ್ರಿಸುವ ಬುದ್ಧಿ ಮನುಷ್ಯನಿಗೆ ಇದೆ. ಐಂದ್ರಿಯಾತೀತವಾದ ವಿವೇಚನೆ ಮತ್ತು ಅರಿವಿನ ಅನುಭವಗಳನ್ನು ಇದೆ ಶರೀರದ ಮೂಲಕವೇ ಪಡೆಯಬಹುದು ಅದಕ್ಕಾಗಿಯೇ
ಶರೀರ ಮಾಧ್ಯಮಂ.. ಖಲು ಧರ್ಮ ಸಾಧನಂ
ಸಾಧನೆ ಮತ್ತು ಧರ್ಮವನ್ನು ಮಾಡಬೇಕು ಧರ್ಮವನ್ನು ಮತ್ತು ಸಾಧನೆ ಮಾಡುವುದಕ್ಕೆ ಬದುಕಬೇಕು. ಅಂತಹ ಶರೀರದ ರಕ್ಷಣೆಗಾಗಿ ಪೋಷಣೆಗಾಗಿ ನಾವು ವಿಷಯಗಳನ್ನು ಭೋಗ ಮಾಡಲೇಬೇಕು. ಭೋಗವಿಲ್ಲದ ಜೀವನವಿಲ್ಲ. ಭೋಗವೇ ಜೀವನವಲ್ಲ.
ಇನ್ನಿತರ ನಾನಾ ರೀತಿಯ ಶಬ್ದ, ಸ್ಪರ್ಶ, ರೂಪ, ರಸ ಗಂಧಗಳ ಸೇವನೆಯನ್ನು ಮಾಡಬೇಕಾಗುತ್ತದೆ ನಿಜ; ಆದರೆ ಅದಕ್ಕೂ ಅಧಿಕವಾಗಿ ನಾವು ಭೋಗ ಮಾಡಿದರೆ ಅದು ಸಂಸಾರಕ್ಕೆ ಕಾರಣ. ಇದೇ ರೀತಿ ಸಂಸಾರಕ್ಕೆ ಉಳಿಯಲು ಕಾರಣವಾಗುತ್ತದೆ ಮತ್ತು ಮೋಕ್ಷಕ್ಕೆ ಅಡ್ಡಿಯಾಗುತ್ತದೆ ಎಂಬುದನ್ನು ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಉಪದೇಶ ಮಾಡಿದ್ದಾರೆ. ದೇವರು ಮಾಡಿದ ಉಪದೇಶವನ್ನು ಅನುಸರಿಸಿಕೊಂಡು ಮುನ್ನಡೆ ಇಡುವುದು ಶ್ರೇಯಸ್ಕರ.