ಶಿವಶರಣ ನುಲಿಯ ಚಂದಯ್ಯ ಜಯಂತಿ ಆಚರಣೆ: ಸ್ವಾಗತ ಕೋರಿದ ಪ್ರಲ್ಹಾದ ಜೋಶಿ

Advertisement

ಧಾರವಾಡ: ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಇದೇ ಆಗಸ್ಟ್ 31ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ಕಾರ್ಯಕ್ರಮಕ್ಕೆ ಶುಭಕೋರಿ ಎಲ್ಲರನ್ನು ಆಹ್ವಾನಿಸಿದ ಸಂದೇಶದೊಂದಿಗೆ ಒಂದು ಕಿರು ದೃಶ್ಯವನ್ನು ಹಂಚಿಕೊಂಡಿದ್ದಾರೆ, ಅವರು ತಮ್ಮ ಸಂದೇಶದಲ್ಲಿ ಕೆರೆಯ ದಡದಲ್ಲಿ ಬೆಳೆದ ಹುಲ್ಲು ತಂದು ಹಗ್ಗ ತಯಾರಿಕೆ ಮಾಡಿ ಅದನ್ನು ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಕರ್ಮಯೋಗಿ ಕಾಯಕಯೋಗಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ಧಾರವಾಡ ಜಿಲ್ಲಾಡಳಿತ ಆಚರಿಸುತ್ತಿರುವುದು ಸಂತೋಷದ ಸಂಗತಿ. ನಮ್ಮ ನಾಡು ಕಂಡ ಇಂತಹ ಶ್ರೇಷ್ಠರನ್ನು ಮುಂದಿನ ಪೀಳಿಗೆ ಯುವಸಮೂಹ ನೆನಪಿನಲ್ಲಿಡಬೇಕಾದರೆ ಸರಕಾರದ ವತಿಯಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಇದೇ ಆಗಸ್ಟ್ 31ರಂದು ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಶುಭಕೋರುತ್ತೇನೆ ಹಾಗೂ ತಮ್ಮೆಲ್ಲರನ್ನು ಪ್ರೀತಿಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ ಎಂದಿದ್ದಾರೆ.
12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮೊದಲು ಮಾಡಿ 770 ಅಮರಗಣಗಳಿಂದ ಈ ಧರ್ಮದ ಸ್ಥಾಪನೆಯಾಗಿದೆ. ಅವರಲ್ಲಿ ನುಲಿಯ ಚಂದಯ್ಯನವರು ಕೂಡ ಒಬ್ಬ ಗಣನಾಯಕರಾಗಿದ್ದಾರೆ.