ಹೊಸಪೇಟೆ(ವಿಜಯನಗರ): ಊಟ ಮಾಡಿ 28 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಹೊಸಪೇಟೆಯ ಎಸ್.ಟಿ ಹಾಸ್ಟೆಲ್ನಲ್ಲಿ ನಡೆದಿದೆ.
ಬುಧವಾರ ರಾತ್ರಿ ಚಿಕನ್ ಊಟ ಮಾಡಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹಾಸ್ಟೆಲ್ನ ಒಟ್ಟು 148 ವಿದ್ಯಾರ್ಥಿಗಳಿದ್ದು, ಅದರಲ್ಲಿ 17 ಜನ ವಿದ್ಯಾರ್ಥಿಗಳು ವೆಜ್ ಊಟ ಮಾಡಿದ್ರು. 131 ವಿದ್ಯಾರ್ಥಿಗಳು ಚಿಕನ್ ಊಟ ಮಾಡಿದ್ದಾರೆ.
ಚಿಕನ್ ಊಟ ಮಾಡಿದ 28 ವಿದ್ಯಾರ್ಥಿಗಳಲ್ಲಿ ರಾತ್ರಿ 2 ಗಂಟೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜ್ವರ, ವಾಂತಿ ಬೇಧಿ ಪ್ರಾರಂಭವಾಗಿದೆ. ಸದ್ಯ ಅಸ್ವಸ್ಥ ವಿದ್ಯಾರ್ಥಿನಿಯರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.