ಗುಪ್ತಾಂಗಕ್ಕೆ ವಿಕೆಟ್‌ನಿಂದ ಚುಚ್ಚಿದ ಪತಿ: ಪತ್ನಿ ಗಂಭೀರ

Advertisement

ಚಿತ್ರದುರ್ಗ: ಪತ್ನಿಯ ಗುಪ್ತಾಂಗದ ಮೇಲೆ ವಿಕೆಟ್‌ನಿಂದ ಹಲ್ಲೆ ನಡೆಸಿ ಪತಿಮಹಾಶಯನೊಬ್ಬ ವಿಕೃತಿ ಮೆರೆದ ಆಘಾತಕಾರಿ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆಯ ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿರುವ ಭಾಸ್ಕರ್ ಎಂಬಾತ ಪತ್ನಿ ರೇಖಾಳ ಶೀಲ ಶಂಕಿಸಿ ಆಕೆಯ ಗುಪ್ತಾಂಗಕ್ಕೆ ವಿಕೆಟ್‍ನಿಂದ ಹಲ್ಲೆ ನಡೆಸಿ ಅಮಾನವೀಯತೆ ತೋರಿದ್ದಾನೆ.
ಭಾಸ್ಕರ್ ತನ್ನ ಪತ್ನಿ ರೇಖಾ ಶೀಲ ಶಂಕಿಸಿ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು ಕೋಪಗೊಂಡ ಭಾಸ್ಕರ್ ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ ನಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಪತಿ ಭಾಸ್ಕರ್ ಮಾನಸಿಕ ಖಿನ್ನತೆಗೊಳಗಾಗಿ ಈ ರೀತಿ ವಿಕೃತಿ ಮೆರೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.