ನಾನೇ ಸಿಎಂ ಆಗ್ತೀನಿ, ನಮ್ಮ ಸರ್ಕಾರ ಬರುತ್ತೆ ಅನ್ನೋ ಭಯವಿದೆ; ಸಿದ್ದರಾಮಯ್ಯ

Advertisement

ಬಾಗಲಕೋಟೆ : ನಾನೇ ಸಿಎಂ ಆಗ್ತೀನಿ, ನಮ್ಮ ಸರ್ಕಾರ ಬರುತ್ತೆ ಅನ್ನೋ ಭಯ ಇದೆ, ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡುತ್ತಿದ್ಧಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ಧಾರೆ.

ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಮಾತನಾಡಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಬಿಡಲ್ಲ ಅಂತ ಬಿಎಸ್​ವೈ ಹೇಳ್ತಾರೆ, ಇದನ್ನು ಹೇಳಲು ಯಡಿಯೂರಪ್ಪ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ವೋಟುಗಳು ಇವರ ಜೇಬಿನಲ್ಲಿ ಇದಾವಾ, ಚುನಾವಣೆಗೆ ಹೋಗೋಣ ಧಮ್, ತಾಕತ್ ಏನು ಅಂತ ಗೊತ್ತಾಗುತ್ತೆ. ಪ್ರವಾಹದಲ್ಲಿ ಅನಾಹುತವಾದ್ರು ಪರಿಹಾರ ಕೊಟ್ಟಿಲ್ಲ, ಪರಿಹಾರ ಕೊಡದಿದ್ರೂ ಮೂರ್ಖರು ಡ್ಯಾನ್ಸ್​ ಮಾಡುತ್ತಿದ್ದರು. ಇದು ಸಂಭ್ರಮ ಪಡೋ ಸಮಯನಾ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ಧಾರೆ.