ಟೊರೊಂಟೊ: ಯುಎಸ್ ಓಪನ್ ಪಂದ್ಯಾವಳಿಯ ನಂತರ ಅಮೆರಿಕದ ಮಹಿಳಾ ಟೆನ್ನಿಸ್ ದಂತಕಥೆ ಸೆರೆನಾ ವಿಲಿಯಮ್ಸ್ ಟೆನಿಸ್‌ಗೆ ಪೂರ್ಣ ವಿರಾಮ ಹೇಳಲಿದ್ದಾರೆಂದು ಮಂಗಳವಾರ ಪ್ರಕಟವಾದ ವೋಗ್ ಲೇಖನದಲ್ಲಿ ತಿಳಿಸಲಾಗಿದೆ.
“ನಾನು ನಿವೃತ್ತಿ ಪದವನ್ನು ಎಂದಿಗೂ ಇಷ್ಟಪಟ್ಟಿಲ್ಲ’ ಎಂದು ಪ್ರಕಟವಾದ ವೋಗ್ ಲೇಖನದಲ್ಲಿ ಸೆರೆನಾ ವಿಲಿಯಮ್ಸ್ ಬರೆದಿದ್ದಾರೆ.
ನಾನು ನನ್ನ ನೆಚ್ಚಿನ ಕ್ರೀಡೆ ಟೆನಿಸ್‌ನಿಂದ ದೂರ ಉಳಿದು ನನಗೆ ಮುಖ್ಯವಾದ ಇತರ ವಿಷಯಗಳ ಕಡೆಗೆ ಹೆಚ್ಚಿನ ಗಮನ ಕೊಡಲು ಬಯಸಿರುವೆ ಎಂದು ಹೇಳಲು ನಾನು ಇಲ್ಲಿದ್ದೇನೆ ಎಂದಿದ್ದಾರೆ.
ಮುಂದಿನ ತಿಂಗಳು 41ನೇ ವರ್ಷಕ್ಕೆ ಕಾಲಿಡುತ್ತಿರುವ ಸೆರೆನಾ ವಿಲಿಯಮ್ಸ್, 73 ವೃತ್ತಿಜೀವನದ ಸಿಂಗಲ್ಸ್ ಪ್ರಶಸ್ತಿಗಳು, 23 ವೃತ್ತಿಜೀವನದ ಡಬಲ್ಸ್ ಪ್ರಶಸ್ತಿಗಳು ಮತ್ತು ವೃತ್ತಿಜೀವನದ ಗೆಲುವಿನಲ್ಲಿ 94 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಗಳಿಸಿದ್ದಾರೆ.
ಸೆರೆನಾ ವಿಲಿಯಮ್ಸ್ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಆಕೆ ಅಂತಾರಾಷ್ಟ್ರೀಯ ಟೆನಿಸ್ ರಂಗದಲ್ಲಿ ಸಾಧಿಸಿದ ಸಾಧನೆಯೇ ಸಾಕ್ಷಿ.
ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್‌ವರೆಗೆ ನಡೆಯಲಿರುವ ಯುಎಸ್ ಓಪನ್ ನಂತರ ನಿವೃತ್ತಿಯಾಗುವುದಾಗಿ ಸೆರೆನಾ ವಿಲಿಯಮ್ಸ್ ತಿಳಿಸಿದ್ದಾರೆ.
ಮೂರು ಬಾರಿ ಚಾಂಪಿಯನ್ ಪಟ್ಟ ಪಡೆದಿರುವ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆದಿರುವ ಟೊರೊಂಟೊ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಸೆರೆನಾ, ಸ್ಪೇನ್ ಆಟಗಾರ್ತಿ ನೂರಿಯಾ ಪ್ಯಾರಿಜಾಯ್ ಅವರನ್ನು 6-3, 6-4ರಿಂದ ಎರಡು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ಮುನ್ನಡೆದರು.
ಸುಮಾರು ಒಂದು ವರ್ಷ ಸ್ಪರ್ಧೆಯಿಂದ ಹೊರಗುಳಿದು, ಕಳೆದ ಜೂನ್ ತಿಂಗಳಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡ ನಂತರ ಸೆರೆನಾ ಟೊರೊಂಟೊ ಓಪನ್‌ನಲ್ಲಿ ಪಾಲ್ಗೊಂಡಿದ್ದಾರೆ.
ಮೊದಲ ಸೆಟ್‌ನ್ನು ಹೆಚ್ಚಿನ ಪರಿಶ್ರಮವಿಲ್ಲದೇ 6-3 ರಿಂದ ಜಯಿಸಿದ ಸೆರೆನಾ, ಎರಡನೇ ಸೆರೆನಾ ಎರಡನೇ ಸೆಟ್‌ನ್ನು 6-4ರಿಂದ ಗೆದ್ದು ಮುನ್ನಡೆದರು.