ಬೆಂಗಳೂರು: ಅಭಿವೃದ್ದಿಗಾಗಿ ನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಲು ಇನ್ನು 15 ದಿನ ಅವಕಾಶ ನೀಡಲಾಗಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ, ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ/ಅನಿಸಿಕೆ/ ಸಲಹೆಗಳನ್ನು ನೀಡುವ ಅವಧಿಯನ್ನು ದಿನಾಂಕ: 30.6.2023 ರಿಂದ 15.7.2023 ರವರೆಗೆ ವಿಸ್ತರಿಸಲಾಗಿದೆ. ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆದ ಡಿ. ಕೆ. ಶಿವಕುಮಾರವರು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈಗಾಗಲೇ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಅಭಿಪ್ರಾಯ/ಸಲಹೆಗಳನ್ನು ಪಡೆದಿರುತ್ತಾರೆ. ಜೊತೆಗೆ, ಬೆಂಗಳೂರಿನ ಹಾಗೂ ಬೇರೆ ರಾಜ್ಯ/ದೇಶ/ ವಿದೇಶದಲ್ಲಿರುವಂತಹ ಎಲ್ಲಾ ವರ್ಗದ ನಾಗರಿಕರು ಬೆಂಗಳೂರಿನ ಅಭಿವೃದ್ಧಿಗಾಗಿ ತಮ್ಮ ಅಭಿಪ್ರಾಯ/ಅನಿಸಿಕೆ/ಸಲಹೆಗಳನ್ನು ನೀಡುವ ಸಲುವಾಗಿ ದಿನಾಂಕ: 21-06-2023 ರಂದು ಪ್ರತ್ಯೇಕ ವೆಬ್ ಫೋರ್ಟಲ್ http://brandbengaluru.karnataka.gov.in ಬಿಡುಗಡೆಗೊಳಿಸಿ ದಿನಾಂಕ: 30-06-2023 ರವರೆಗೆ ನಾಗರಿಕರು ಅಭಿಪ್ರಾಯ/ಅನಿಸಿಕೆ/ಸಲಹೆಗಳನ್ನು ನೀಡುವಂತೆ ನಾಗರಿಕರಲ್ಲಿ ಕೋರಲಾಗಿತ್ತು. ಅದರಂತೆ, ನಾಗರಿಕರಿಂದ ನಿರೀಕ್ಷೆಗೂ ಮೀರಿ ಅನಿಸಿಕೆ/ಸಲಹೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಅಭಿಪ್ರಾಯ/ಸಲಹೆಗಳ ಸಮೀಕ್ಷೆಯ ಅವಧಿಯನ್ನು ದಿನಾಂಕ: 30.06.2023 ರಿಂದ ದಿನಾಂಕ: 15.07.2023 ರವರೆಗೆ ವಿಸ್ತರಿಸಲಾಗಿದ್ದು, ಎಲ್ಲಾ ನಾಗರಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು #BrandBengaluru, #BetterBengaluru ಸಮೀಕ್ಷೆಯಲ್ಲಿ ಪಾಲ್ಗೊಂಡು ಇನ್ನೂ ಹೆಚ್ಚು-ಹೆಚ್ಚು ಸಲಹೆಗಳನ್ನು ನೀಡುವ ಮೂಲಕ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಕೈ-ಜೋಡಿಸಬೇಕಾಗಿ ವಿನಂತಿ. ನಾಗರಿಕರು ವೆಬ್ ಪೋರ್ಟಲ್ http://brandbengaluru.karnataka.gov.in ಮೂಲಕ ಮಾತ್ರವಲ್ಲದೆ ವ್ಯಾಟ್ಸ್ಆಪ್ ಸಂಖ್ಯೆ: 9480685700 ಮೂಲಕವೂ ಅಭಿಪ್ರಾಯ/ ಅನಿಸಿಕೆ/ ಸಲಹೆಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ: 1533 ಗೆ ಕರೆಮಾಡಬಹುದಾಗಿದೆ ಎಂದಿದ್ದಾರೆ.