ಅಸ್ತಿತ್ವಕ್ಕಾಗಿ ಡಿಜಿಟಲ್ ನವೋದ್ಯಮಗಳ ಹರಸಾಹಸ

Advertisement

ಹಲವು ಸ್ಟಾರ್ಟಪ್‌ಗಳ ವ್ಯವಹಾರ ಸ್ಥಗಿತ

ನವದೆಹಲಿ: ಭಾರತದ ಕ್ರಿಯೆಟರ್ ಇಕಾನಮಿ(ಡಿಜಿಟಲ್ ಸಂಬಂಧಿ) ಅವಕಾಶದಲ್ಲಿ ಸೃಷ್ಟಿಸಲ್ಪಟ್ಟ ನವೋದ್ಯಮಗಳು ಈಗ ಉಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿವೆ. ಕಳೆದ ೧೨ರಿಂದ ೧೮ ತಿಂಗಳ ಅವಧಿಯಲ್ಲಿ ಇಂತಹ ಅನೇಕ ನವೋದ್ಯಮಗಳು ತಮ್ಮ ಕಾರ್ಯವ್ಯವಹಾರವನ್ನೇ ಮುಚ್ಚಿವೆ.
೨೦೨೦-೨೧ರ ಅವಧಿಯಲ್ಲಿ ಸೃಷ್ಟಿಸಲ್ಪಟ್ಟ ಈ ರೀತಿಯ ಬಹುತೇಕ ನವೋದ್ಯಮಗಳು ಡಿಜಿಟಲ್ ಕ್ರಿಯೆಟರ್‌ಗಳಿಗೆ ನೆರವಾಗುವ ಉದ್ದೇಶದಿಂದ ಆರಂಭವಾಗಿದ್ದವು. ಆಗ ಇಂಥ ನವೋದ್ಯಮಗಳು ಡಿಜಿಟಲ್ ಕ್ರಿಯೆಟರ್‌ಗಳ ಕಂಟೆಂಗಳನ್ನು ನಗದೀಕರಿಸುವಲ್ಲಿ ನೆರವಾಗಲು ತಮ್ಮ ಉತ್ಪನ್ನ ಒದಗಿಸುವ ಪ್ರಸ್ತಾವಗಳನ್ನು ಮುಂದಿರಿಸಿದ್ದವು. ಆದರೆ ಮಾರುಕಟ್ಟೆಗೆ ಸರಿಹೊಂದುವ ಉತ್ಪನ್ನಗಳನ್ನು ಕಂಡುಕೊಳ್ಳುವ ಮೂಲ ಉದ್ದೇಶದಲ್ಲೇ ಅವು ವಿಫಲವಾದವು. ಹೀಗಾಗಿ ನವೋದ್ಯಮಗಳಲ್ಲಿ ಹಲವು ಸಂಸ್ಥೆಗಳನ್ನು ಸಿಕ್ಕಿದ ಬೆಲೆಗೆ ಮಾರಾಟ ಮಾಡಲಾಗಿದೆ. ಕಳೆದ ಕೆಲವು ತಿಂಗಳಲ್ಲಿ ಮುಚ್ಚಲ್ಪಟ್ಟ ಕ್ರಿಯೆಟರ್ ಇಕಾನಮಿ ಸ್ಟಾರ್ಟಪ್‌ಗಳ ವಿವರ ಈ ಕೆಳಗಿನಂತಿವೆ.
ಪ್ಯಾನ್ ಆಶ್ರಿತ ಸ್ಟಾರ್ಟಪ್ ಆಗಿರುವ ಪೆನ್‌ಸರ್ಕಲ್ ತನ್ನ ವ್ಯವಹಾರ ನಿಲ್ಲಿಸಿರುವುದನ್ನು ಸಹ ಸ್ಥಾಪಕ ಜಯನ್ ನಾಯರ್ ದೃಢಪಡಿಸಿವೆ. ಸ್ಟ್ರೀಮ್ ಆ್ಯಂಕರ್ ಸ್ಟಾರ್ಟಪ್ ಕಾರ್ಯನಿರ್ವಹಣಾ ರೀತಿಯಲ್ಲಿ ‌ ನಿಷ್ಕ್ರಿಯವಾಗಿವೆ. ಆದರೆ ನಿತಿನ್ ಕಾಮತ್ ಬೆಂಬಲದ ಈ ಕಂಪನಿಯ ನಿಧಿ ವ್ಯವಹಾರ ಲಭ್ಯವಾಗಿಲ್ಲ. ಕ್ರೆಡಿಟ್ ಕಾರ್ಡ್ ಆಧಾರಿತ ಪಿಕ್ಸಲ್ ಕಾರ್ಡ್ ಕಂಪನಿ ಈಗ ರಿಸರ್ವ್ ಬ್ಯಾಂಕಿನ ಪ್ರಿಪೇಡ್ ಪೇಮೆಂಟ್ ಇನ್ಸ್ಟ್ರುಮೆಂಟ್ ನಿಯಮಾವಳಿಗಳಲ್ಲಿ ಬದಲಾಗಿರುವುದನ್ನು ಉಲ್ಲೇಖಿಸಿ ತನ್ನ ವ್ಯವಹಾರ ಸ್ಥಗಿತ ಮಾಡಿದೆ.
ನವೋದ್ಯಮಕ್ಕೆ ಸೂಕ್ತವಲ್ಲದ ನಿಯಮಾವಳಿಗಳ ವಾತಾವರಣದಲ್ಲೂ ಕಂಪನಿ ಪ್ರಮುಖ ಪಾತ್ರ ನಿರ್ವಹಿಸಿತ್ತು ಎಂದು ಅದರ ಸಹಸ್ಥಾಪಕ ಆದಿತ್ಯ ಕುಲಕರ್ಣಿ ಹೇಳಿಕೊಂಡಿದ್ದಾರೆ. ಮ್ಯಾಟ್ರಿಕ್ಸ್ ಪಾರ್ಟನರ್ ಬೆಂಬಲಿತ ಸ್ಟಾರ್ಟಪ್ ಪ್ರೊಟಾನ್ ಕಂಪನಿಯು ಹವ್ಯಾಸಿ ನವೋದ್ಯಮಗಳಿಗೆ ಆಡಿಯನ್ಸ್(ಪ್ರೇಕ್ಷಕ) ನಿರ್ವಹಣೆ ಹಾಗೂ ನಗದೀಕರಣ ಸಾಧನಗಳನ್ನು ಒದಗಿಸುತ್ತಿತ್ತು. ಆದರೆ ಆರು ತಿಂಗಳಲ್ಲಿ ೯೦ ಲಕ್ಷ ಡಾಲರ್ ನಿಧಿ ಸಂಗ್ರಹಿಸಿದ ನಂತರ ಮುಚ್ಚಲ್ಪಟ್ಟಿದೆ.
ಲೈಟ್‌ಸ್ಪೀಡ್ ಬೆಂಬಲಿತ ಫ್ರಂಟ್‌ರೋ ಸ್ಟಾರ್ಟಪ್ ಜನಪ್ರಿಯರಾದ ಗಣ್ಯರಿಂದ ಕೋರ್ಸುಗಳನ್ನು ಮಾರುವ ಉದ್ದೇಶದಿಂದ ರಚನೆಯಾಗಿದ್ದಲ್ಲದೆ, ಹೂಡಿಕೆದಾರರಿಂದ ೧ ಕೋಟಿ ೮೦ ಲಕ್ಷ ಡಾಲರ್ ನಿಧಿ ಸಂಗ್ರಹಿಸಿದ ನಂತರ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಲು ಮುಂದಾಗಿದೆ. ಮೇಕ್‌ಮೈಟ್ರಿಪ್ ಸಹಸ್ಥಾಪಕ ಸಚಿನ್ ಬಾಟಿಯಾರವರ ವಿಡಿಯೋ ಕಾಮರ್ಸ್ ಸ್ಟಾರ್ಟಪ್ ಬುಲ್‌ಬುಲ್ ಅನ್ನು ಕಳೆದ ಮಾರ್ಚ್ ತಿಂಗಳಲ್ಲಿ ಗೂಡ್ ಗ್ಲ್ಯಾಮ್ ಗ್ರೂಪ್ ಖರೀದಿಸಿದೆ. ಯೂಟ್ಯೂಬ್ ತನ್ನ ಸೋಷಿಯಲ್ ಕಾಮರ್ಸ್ ಸಿಮ್‌ಸಿಮ್ ಆಪ್ ಅನ್ನು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವ್ಯವಹಾರ ಸ್ಥಗಿತ ಮಾಡಿದೆ. ಈ ಸ್ಟಾರ್ಟಪ್ ಅನ್ನು ಭಾರತೀಯರೊಬ್ಬರಿಂದ ೭ ಕೋಟಿ ಡಾಲರ್ ಖರೀದಿಸಿತ್ತು. ಕ್ಯೂರ್ನೆರ್ ಕಂಪನಿ ಈಗ ಕಾರ್ಯಾಚರಿಸುತ್ತಿಲ್ಲ. ಇದು ೬,೯೦,೦೦೦ ಡಾಲರ್ ನಿಧಿಯೊಂದಿಗೆ ಕಾರ್ಯಾರಂಭ ಮಾಡಿತ್ತು.