ಜಿಹಾದ್ ಎಂದರೆ ಪ್ರಾಣ ತೆಗೆಯುವುದಲ್ಲ; ಪ್ರಾಣತ್ಯಾಗ

ಗುರುಬೋಧೆ
Advertisement

ಹಜರತ್ ಮೊಹಮ್ಮದ ಪೈಗಂಬರರ ಮಗಳಾದ ಹಜರತ್ ಫಾತಿಮಾರವರ ಇಬ್ಬರು ಗಂಡು ಮಕ್ಕಳುಲ್ಲಿ ಹಿರಿಯ ಮಗನಾದ ಹಜರತ್ ಹಸನ್ ಇನ್ನೊಬ್ಬ ಕಿರಿಯ ಮಗ ಹಜರತ್ ಹುಸೇನರು ಮತಾಂಧ ಏಜೀದ ಹಜರತ್ ಹುಸೇನರಿಗೆ ನಾನು ನಿಮ್ಮ ಧರ್ಮ ಸ್ವೀಕಾರ ಮಾಡುತ್ತೇನೆ. ನಿಮ್ಮ ಪರಿವಾರ ಸಮೇತ ನಮ್ಮ ಆಸ್ಥಾನದ ಬಿನ್ನಹಕ್ಕೆ ಬಂದು ನಮ್ಮನ್ನು ಉದ್ಧರಿಸಬೇಕು ಎಂದು ಸುಳ್ಳು ಹೇಳಿ ಎಲ್ಲರನ್ನು ಕೂಫ ಎಂಬ ಸ್ಥಾನಕ್ಕೆ ಕರೆಯಿಸಿ ನೀರೂ ಸಿಗದ ಜಾಗದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಡಲು ಆರಂಭಿಸಿದ ಏಜೀದ್ ಹೇಳಿತ್ತಾನೆ. ಹುಸೇನರೇ ನೀವು ನಮ್ಮ ಸಂಪ್ರದಾಯ ಒಪ್ಪಿಕೊಂಡರೇ ನಿಮ್ಮನ್ನು ರಾಜನನ್ನಾಗಿ ಮಾಡುತ್ತೇನೆ ಇಲ್ಲವಾದರೆ ನಿಮ್ಮ ವಂಶವನ್ನೇ ನಿರವಂಶವನ್ನಾಗಿಸುತ್ತೇನೆ ಎಂದು ಗದ್ದರಿಸುತ್ತಾನೆ, ಆದರೆ ಅವನ ಈ ಗದರಿಕೆಗೆ ಸೊಪ್ಪು ಹಾಕದೇ ಹಜರತ್ ಹುಸೇನರು, ಆಯೇ ಏಜೀದನೇ ಕೇಳು, ನಾನು ಸರ್ವಶಕ್ತನಾದ ನನ್ನ ಮತ್ತು ನಿನ್ನ ಸೃಷ್ಟಿಕರ್ತನಾದ ಅಲ್ಹಾಹ ನನ್ನ ಜೊತೆ ಇದ್ದಾನೆ. ನನ್ನ ಅಜ್ಜನವರರಾದ ಮೊಹ್ಮದ ಪೈಗಂಬರರು ಹಾಕಿ ಕೊಟ್ಟ ಸನ್ಮಾರ್ಗವನ್ನು ನಾನೆಂದು ಬಿಡುವದಿಲ್ಲ. ಅದಕ್ಕಾಗಿ ನಾನು ಪ್ರಾಣವ ಕೊಟ್ಟರೂ ಪರವಾಗಿಲ್ಲ. ನನ್ನ ಧರ್ಮ ರಕ್ಷಣೆಗಾಗಿ ನನ್ನ ಎಲ್ಲಾ ಸರ್ವಸ್ವವನ್ನು ಬಲಿ ಕೊಡಲು ಸಿದ್ಧ ಎಂದು ಹೇಳಿದರು. ಆಗ ಈ ಧರ್ಮಯುದ್ಧ ಪ್ರಾರಂಭಾಯಿತು. ಇದಕ್ಕೆ ಲಿಂಗಾಯತ ಧರ್ಮದಲ್ಲಿ ಪಂಚಾಚಾರಗಳಲ್ಲೊಂದಾದ ಭೃತ್ಯಾಚಾರ ಎಂದು ಕರೆಯುತ್ತಾರೆ.

ನನ್ನ ಧರ್ಮಕ್ಕೆ ಸಂಕಟ ಬಂದಾಗ ಜೀವ ಕೊಟ್ಟರೂ ಪರವಾಗಿಲ್ಲ. ನನ್ನ ಧರ್ಮ ಸಂರಕ್ಷಣೆ ಮಾಡಬೇಕು. ಇದಕ್ಕೆ ಜಿಹಾದ್ ಎಂದು ಕರೆಯುತ್ತಾರೆ. ಆದರೆ ಜಿಹಾದ್ ಎಂಬರ್ಥವನು ಬೇರೆಯಾಗಿಯೇ ತಿಳಿಯುತ್ತ ಬರಲಾಗುತ್ತದೆ. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಜೀವ ತೆಗೆಯುವದು ಜೀಹಾದ್ ಆಗುವದಿಲ್ಲ ಬದಲಾಗಿ ಧರ್ಮ ಸಂರಕ್ಷಣೆಗಾಗಿ ಜೀವವನ್ನೇ ತ್ಯಾಗ ಮಾಡುವದು ಅಥವಾ ಪ್ರಾಣ ಕೊಡುವದು ಎಂಬರ್ಥ. ಕರ್ತವ್ಯ ಆದರ ತನ್ನ ಧರ್ಮ ರಕ್ಷಣೆಗಾಗಿ ಮತ್ತೊಬ್ಬರ ಪ್ರಾಣ ತೆಗೆಯುವದು ಇದು ಯಾವ ಧರ್ಮದ ನ್ಯಾಯ. ಯಾವ ಧರ್ಮವೂ ಕೂಡ ಹೊಡೆದಾಡಿ ಬಡೆದಾಡಿ ಎಂದು ಯಾವ ಧರ್ಮಗ್ರಂಥಗಳು ಹೇಳಿಲ್ಲ. ಬಸವಣ್ಣನವರು ದಯವೇ ಧರ್ಮದ ಮೂಲವಯ್ಯಾ ಎಂದು ಹೇಳಿರುವರು. ಧರ್ಮದ ಪ್ರಚಾರ ಮತ್ತು ಪ್ರಸಾರ ನಯವಿನಯದಿಂದ ಆಗುತ್ತದೆ. ಹೊರತು ಕತ್ತಿ, ಚಾಕು ಚೂರಿಗಳಿಂದಲ್ಲ ಎಂಬುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಹಜರತ್ ಹುಸೇನ್‌ರು ಶಾಂತಿಪ್ರಿಯರಾಗಿದ್ದರು. ಅದಕ್ಕಾಗಿ ಯಾವುದೇ ಆಯುಧಗಳಿಲ್ಲದೇ ಅವರೊಂದಿಗೆ ಅಲ್ಲಾಹ್ ಕೃಪೆ ಒಂದೇ ಅವರ ಸಾಧನವಾಗಿತ್ತು. ಧರ್ಮದ ರಕ್ಷಣೆಗಾಗಿ ತನ್ನೊಂದಿಗೆ ಇಡೀ ಪರಿವಾರ ಸಣ್ಣ ಸಣ್ಣ ಮಕ್ಕಳನ್ನು ಬಲಿ ಕೊಟ್ಟು ಹೋರಾಡಿ ಕರ್ಬಲಾ ಭೂಮಿಯಲ್ಲಿ ಮಡಿದರು. ಅದರ ದ್ಯೋತಕವಾಗಿ ಮೊಹರಂ ಆಚರಿಸುತ್ತೇವೆ. ಈ ಹಬ್ಬ ನಾಡಿನಲ್ಲಿ ಭಾವೈಕ್ಯತೆಯನ್ನು ಬಿಂಬಿಸುತ್ತದೆ. ಹಿಂದುವಾಗಲಿ ಮುಸ್ಲಿಂರಾಗಲಿ ಇನ್ನಾರೇ ಆಗಲಿ. ಅವರಲ್ಲಿನ ಅಹಿಂಸೆ, ಕರುಣೆ, ಮೌಲ್ಯ, ಪ್ರೀತಿ, ನಂಬಿಕೆಗಳನ್ನು ಆದರಿಸುತ್ತದೆ ಹೊರತು ಹಿಂಸೆಯನ್ನಲ್ಲವೆಂಬುದನ್ನು ಮೊಹರಂ ಸಾದರ ಪಡಿಸುತ್ತದೆ.

ಗುರುಬೋಧೆ