ಕೊಚ್ಚಿಹೋದ ಸೋಗಲಿ ಹಳ್ಳದ ಸೇತುವೆ….

Advertisement

ವಿಜಯಪುರ : ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಳಿಕೋಟಿ ತಾಲೂಕಿನ ಸೋಗಲಿ ಗ್ರಾಮದ ಹತ್ತಿರದ ಹಳ್ಳದ ಸೇತುವೆ ನೋಡ ನೋಡುತ್ತಿದ್ದಂತೆ ಕೊಚ್ಚಿಕೊಂಡು ಹೋಗಿದೆ. ಸೋಗಲಿ ಹಾಗೂ ಮೂಕಿಹಾಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು ಸೋಗಲಿ ಹಳ್ಳದ ಸೇತುವೆ ಎಂದು ಕರೆಯಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು ಸಣ್ಣ ಸಣ್ಣ ಸೇತುವೆ ಹಾಗೂ ರಸ್ತೆಗಳು ಕೊಚ್ಚಿಕೊಂಡು ಹೋಗುತ್ತಿವೆ.ಸೋಗಲಿ ಗ್ರಾಮದ ಸೇತುವೆ ಹಾಗೂ ಸೇತುವೆಯ ಅಕ್ಕ-ಪಕ್ಕದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಹಳ್ಳದ ನೀರಿನ ರಬಸಕ್ಕೆ ಕುಸಿದು ಹೋಗುತ್ತಿರುವುದನ್ನು ಗ್ರಾಮದ ಯುವಕರೇ ವಿಡಿಯೋ ಮಾಡಿಕೊಂಡಿದ್ದಾರೆ. ಗ್ರಾಮಸ್ಥರಿಗೆ ತಾಳಿಕೋಟ ತಾಲೂಕಿನ ಸಂಪರ್ಕ ಕಡಿತವಾಗಿದೆ.