ಆಗಸದಲ್ಲೊಂದ ಸೌರ ಪ್ರಭೆ

Advertisement

ಇಂದು ಮಧ್ಯಾನ್ಹ 12.30 ಗಂಟೆಗೆ ನಭೋ ಮಂಡಲದಲ್ಲಿ ” ಆಕರ್ಷಕವಾದ ಸೌರ ಪ್ರಭೆ ( Sun Halo ) ಕಲಾದಗಿಯಲ್ಲಿ ಅರ್ದಗಂಟೆಗಳ ಕಾಲ ಕಂಡು ಬಂರುವುದರೊಂದಿಗೆ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಅಚ್ಚರಿ ಮೂಡಿಸಿತು.
ಮಧ್ಯಾಹ್ನ 12 ರ ನಂತರ ಏಕಾಏಕಿ ಕಾಣಿಸಿಕೊಂಡ ಈ ಖಗೋಳ ವಿಸ್ಮಯದ ಬಗ್ಗೆ ಬಾಗಲಕೋಟೆಯ ಖಗೋಳ ಶಾಸ್ತ್ರಜ್ಞ ವಿಜಯಕುಮಾರ ಕುಲಕರ್ಣಿ ಹೀಗೆ ವಿವರಿಸುತ್ತಾರೆ.
ಸಂಪೂರ್ಣ ಕಾಮನಬಿಲ್ಲು ಎಂದು ಕರೆಯುವ ಈ ಸೌರ ಪ್ರಭೆಯು ನಮ್ಮ ವಾತಾವರಣದಲ್ಲಿ 20,000 ಅಡಿಗಳ ಮೇಲಿರುವ ಸಿರ್ರಸ್ ಮೋಡಗಳೊಳಗಿರುವ ಮಂಜುಗಡ್ಡೆಯ ಹರಳುಗಳು (Hexagon ice crystals) ಸೂರ್ಯನ ಬೆಳಕನ್ನು ಪ್ರತಿಫಲನ, ವಕ್ರೀಭವನ, ಹಾಗೂ ಚದುರಿಸುವ ಮೂಲಕ ಉಂಟಾಗುವ ಖಗೋಳಿಯ ಘಟನೆಯಾಗಿದೆ. ಸೂರ್ಯನ ಸುತ್ತ ಸುಮಾರು 22 ಡಿಗ್ರಿ ಅಂತರದಲ್ಲಿ ಆವರಿಸಿರುವ ಈ ಸೌರ ಪ್ರಭೆಯು ಹವಾಮಾನ ತಜ್ಞರ ಪ್ರಕಾರ ಮಳೆಯಾಗುವ ಮುನ್ಸೂಚನೆ ಎಂದು ಹೇಳುತ್ತಾರೆ. ನಮ್ಮ ಹಿರಿಯರು ಕೂಡಾ ಇದನ್ನು ” ಕೆರೆ ಕಟ್ಟುವುದು ” ಎಂದು ಗುರುತಿಸಿದ್ದಾರೆ.
ಅಮೇರಿಕಾದ ಬುಡಕಟ್ಟು ಜನಾಂಗದವರು ಕೂಡಾ ಈ ಸನ್ ಹ್ಯಾಲೋ ಕಂಡು ಬಂದಾಗ ಎನೋ ಬದಲಾವಣೆ ಆಗಲಿದೆ ಎಂದು ನಂಬಿದ್ದರು.ಎನೇ ಇರಲಿ ಈ ಖಗೋಳೀಯ ಕೌತುಕಗಳು ನಮ್ಮೆಲ್ಲರ ಮನಸ್ಸನ್ನು ಆಕರ್ಷಿಸುವಲ್ಲಿ ಸಂಶಯವೇ ಇಲ್ಲ.