ಬೆಂಗಳೂರಿನ ಮೂಲ ಸೌಕರ್ಯ ತ್ವರಿತವಾಗಿ ಸುಧಾರಿಸುವಂತೆ ಕ್ರಮಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಐಟಿ ಕಂಪನಿಗಳು ಮೂಲಸೌಕರ್ಯ ಕೊರತೆಯಿಂದಾಗಿ 225 ಕೋಟಿ ರೂ. ನಷ್ಟ ಅನುಭವಿಸಿರುವುದಾಗಿ ಸಿಎಂಗೆ ಪತ್ರ ಬರೆದಿವೆ. ಹಾಗೆಯೇ ರಾಜ್ಯ ತೊರೆಯುವ ಮತ್ತೊಂದು ಎಚ್ಚರಿಕೆ ನೀಡಿವೆ. ಇದರಿಂದ ರಾಜ್ಯ ರಾಜಧಾನಿಯಲ್ಲಿ ಮತ್ತಷ್ಟು ನಿರುದ್ಯೋಗ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ.
ಬೆಂಗಳೂರು ಇಂದು ಐಟಿ ರಾಜಧಾನಿಯಾಗಿ ಗುರುತಿಸಿಕೊಳ್ಳಲು ಕೆಂಪೇಗೌಡ ಅವರ ಕೊಡುಗೆ ಬಹಳಷ್ಟಿದೆ. ಆದರೆ ಬಿಜೆಪಿ ಸರ್ಕಾರ ಹಣದಾಸೆಗೆ ಪ್ರತೀ ಕಾಮಗಾರಿಯಲ್ಲೂ 40% ಕಮಿಷನ್ ಪಡೆಯುವ ಮೂಲಕ ಬೆಂಗಳೂರಿನ ಮೂಲಸೌಕರ್ಯಗಳನ್ನು 3ನೇ ದರ್ಜೆಗೇರಿಸಿದೆ. ಹೊರ ರಾಜ್ಯಗಳು ಇದರ ಲಾಭ ಪಡೆಯುವ ಮುನ್ನ ಬೆಂಗಳೂರಿನ ಮೂಲಸೌಕರ್ಯ ತ್ವರಿತವಾಗಿ ಸುಧಾರಿಸಬೇಕು ಎಂದಿದ್ದಾರೆ.