ಕಾಂಗ್ರೆಸ್‌ ಕಾಲದ ಹಗರಣ ಬಯಲಿಗೆ: ಸಿ.ಟಿ. ರವಿ

ಸಿ.ಟಿ. ರವಿ
Advertisement

ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣಗಳನ್ನು ಬಯಲಿಗೆ ಎಳೆಯುವುದು ಮತ್ತು ಅಂದಿನ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ದಿನಗಳಲ್ಲಿ ಕಾಂಗ್ರೆಸ್ ಕಾಲದ ಭ್ರಷ್ಟಾಚಾರವನ್ನು ಜನರ ಮುಂದೆ ಇಡುತ್ತೇವೆ. ಈ ವಿಚಾರದ ಕುರಿತು ಈಗಲೇ ಹೆಚ್ಚಿನ ವಿವರ ನೀಡಲ್ಲ, ಮುಂದೆ ಎಲ್ಲವೂ ನಿಮಗೇ ತಿಳಿಯಲಿದೆ ಎಂದರು.