ರಾಹುಲ್ ಕೋಲಾರಕ್ಕೆ ಬಂದ್ರಲ್ಲ ಇನ್ನು ನನ್ನ ಗೆಲುವು ಖಚಿತ

ವರ್ತೂರ್‌ ಪ್ರಕಾಶ
Advertisement

ಕೋಲಾರ: ರಾಹುಲ್ ಗಾಂಧಿ ಕೋಲಾರಕ್ಕೆ ಬಂದು ಹೋಗಿದ್ದಾರೆ ಹೀಗಾಗಿ ನಾನು ಗೆಲ್ಲುವೆ ಎಂದು ವರ್ತೂರ್ ಪ್ರಕಾಶ್ ವ್ಯಂಗ್ಯಮಾಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿ ಹೋಗಿ ಭಾಷಣ ಮಾಡಿರೋ ಕಡೆ ಎಲ್ಲಿಯೋ ಕಾಂಗ್ರೇಸ್ ಗೆದ್ದಿಲ್ಲ. ಹೀಗಾಗಿ ಕೋಲಾರದಲ್ಲಿ ಬಿಜೆಪಿ ಭಾವುಟ ಹಾರಿಸುವುದು ಇದರ ಸಂಕೇತ. ಕೋಲಾರ ಕಾಂಗ್ರೇಸ್ ಅಭ್ಯರ್ಥಿಯಾಗಿ ಕೊತ್ತೂರು ಮಂಜುನಾಥ್ ಆಯ್ಕೆಯಾಗಿದ್ದಾರೆ, ಅವರು ನನ್ನ ಸ್ನೇಹಿತರು. ಪ್ರತಿಸ್ಪರ್ದಿ ಯಾರೇ ಇದ್ದರು ಬಿಜೆಪಿ ಭಾವುಟ ಬಹಳ ದೊಡ್ಡಮಟ್ಟದಲ್ಲಿ ಹಾರಿಸುವೆ ಇಡೀ ದೇಶ ನೋಡುವ ಹಾಗೆ ರಿಸಲ್ಟ್ ಇರುತ್ತೆ ಎಂದರು.
ಜಗದೀಶ್ ಶೆಟ್ಟರ್ ಕುರಿತು:
ನಾನು ಬಿಜೆಪಿಗೆ ಹೊಸದಾಗಿ ಸೇರಿದ್ದೇನೆ, ಅವರು ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ.