ಹುಬ್ಬಳ್ಳಿ: ಕೆಲವರು ತಮ್ಮ ಸ್ವ ಹಿತಾಸಕ್ತಿಗಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಿ ಪಕ್ಷದಿಂದ ಹೊರಬರಲು ಕಾರಣರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆರೋಪಿಸಿದರು.
ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಯಾವುದೇ ಅಧಿಕಾರವನ್ನು ಪಕ್ಷದಿಂದ ಬಯಸಿರಲಿಲ್ಲಮ ಅದರೂ ಕೆಲವರು ಶೆಟ್ಟರ್ ಮತ್ತೆ ಆಯ್ಕೆಯಾಗಿ ಬಂದರೆ ಉನ್ನತ ಹುದ್ದೆಗಳು ತಮ್ಮ ಕೈ ತಪ್ಪುತ್ತವೆ ಎಂಬ ದುರುದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿದ್ದಾರೆ. ಷಡ್ಯಂತ್ರ ಯಾವ್ಯಾವ ರೀತಿ ನಡೆಯಿತು ಎಂಬುದನ್ನು ಮುಂದಿನ ದಿನಗಳಲ್ಲಿ ನಿಮಗೇ ಗೊತ್ತಾಗುತ್ತದೆ ಎಂದರು.