ಚಿಕ್ಕೋಡಿ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಎಮ್ಮೆಗಳ ಸಜೀವ ದಹನಗೊಂಡ ಘಟನೆ ತಾಲೂಕಿನ ಯಾದ್ಯಾನವಾಡಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ರೈತ ಪಾರಿಶ ರೂಪಾಳೆ ಅವರ ಗುಡಿಸಲಿಗೆ ಅವರಿಗೆ ಸೇರಿದ ಗುಡಿಸಲು ಸಂಪೂರ್ಣ ಭಸ್ಮಗೊಂಡಿದೆ. ಬೆಂಕಿಯಿಂದಾಗಿ ಗುಡಿಸಲೊಳಗೆ ಇದ್ದ ಎರಡು ಎಮ್ಮೆಗಳು ಸಜೀವ ದಹನಗೊಂಡಿದ್ದು, ಒಂದು ಆಕಲು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಆರು ಜೋಳದ ಚೀಲ, ಡ್ರಿಪ್ ಪೈಪ್, ನಾಲ್ಕು ಗೊಬ್ಬರ ಚೀಲ್, ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ.
ಘಟನೆ ಮಾಹಿತಿ ಪಡೆದ ಶಾಸಕ ಗಣೇಶ ಹುಕ್ಕೇರಿ ಗ್ರಾಮಕ್ಕೆ ಭೇಟಿ ನೀಡಿ ರೈತನನ್ನು ಸಾಂತ್ವನ ಹೇಳಿದರು. ತಹಸೀಲ್ದಾರ್ ಚಿದಂಬರ ಕುಲಕರ್ಣಿ ಅವರಿಗೆ ಕರೆ ಮಾಡಿ ತಕ್ಷಣ ಪರಿಹಾರ ನೀಡುವಂತೆ ಅದೇಶಿಸಿದರು