ದೆಹಲಿಗೆ ಶೆಟ್ಟರ್ ದೌಡು

Advertisement

ಹುಬ್ಬಳ್ಳಿ: ನನ್ನ ಹೆಸರು ಮೊದಲ ಪಟ್ಟಿಯಲ್ಲಿ ಬರಬೇಕಿತ್ತು. ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿದ್ರು. ಹೀಗಾಗಿ ದೆಹಲಿಗೆ ಹೋಗ್ತಿದಿನಿ ಎಂದು ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿರುವ ಅವರು, ಮಂಗಳವಾರ ಸಂಜೆ ಫೋನ್ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಬನ್ನಿ ಓಪನ್ ಆಗಿ ಚರ್ಚೆ ಮಾಡೋಣ ಎಂದಿದ್ದಾರೆ. ಹೀಗಾಗಿ ನಾನು ಹೋಗ್ತೀದಿನಿ. ನನ್ನ ಸ್ಟ್ಯಾಂಡ್ ನಾನು ಹೇಳಿದ್ದೇನೆ, ನನಗೆ ಟಿಕೆಟ್ ಸಿಗೋ ಹೋಪ್ಸ್ ಇದೆ.
ನಾನು ಸ್ಪರ್ಧೆ ಮಾಡೇ ಮಾಡ್ತೀನಿ ಎಂದರು.
ನಾನು ದಿಲ್ಲಿ ಮಟ್ಟದಲ್ಲಿ ಯಾರನ್ನೂ ಸಂಪರ್ಕ ಮಾಡಿರಲಿಲ್ಲ. ಇದೀಗ ಅವರೇ ನನ್ನ ಬನ್ನಿ ಎಂದಿದ್ದಾರೆ ಎಂದ ಶೆಟ್ಟರ ಮೊದಲ‌ ಪಟ್ಟಿಯಲ್ಲಿ ಹೆಸರು ಬರದೆ ಇರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.