ಬೆಳಗಾವಿ: ಎಲ್ಲರೂ ಅಂದುಕೊಂಡಂತೆ ಅಳೆದು ತೂಗಿ ಬಿಜೆಪಿ ಹೈ ಕಮಾಂಡ ಟಿಕೆಟ್ ಘೋಷಣೆ ಮಾಡಿದೆ. ಮುಖ್ಯವಾಗಿ ಬೆಳಗಾವಿ ಉತ್ತರದಲ್ಲಿ ಲಿಂಗಾಯತರಿಗೆ ಮಣೆ ಹಾಕಿರುವ ಬಿಜೆಪಿ ಹೈಕಮಾಂಡ ಅಲ್ಲಿ ಡಾ.ರವಿ ಪಾಟೀಲರಿಗೆ ಟಿಕೆಟ್ ನೀಡಿದೆ.
ಈ ಮೂಲಕ ಲಿಂಗಾಯತರ ಕೂಗಿಗೆ ಬಿಜೆಪಿ ಹೈಕಮಾಂಡ ಬೆಲೆ ನೀಡಿದೆ. ಇಲ್ಲಿ ಹಾಲಿ ಶಾಸಕರೂ ಆಗಿರುವ ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ ಬೆನಕೆಗೆ ಟಿಕೆಟ್ ಮಿಸ್ ಆಗಿದೆ. ಬೆಳಗಾವಿ ದಕ್ಷಿಣಕ್ಕೆ ನೀರಿಕ್ಷಿಸಿದಂತೆ ಹಾಲಿ ಶಾಸಕ ಅಭಯ ಪಾಟೀಲರಿಗೆ ಟಿಕೆಟ್ ನೀಡಲಾಗಿದೆ. ಸದ್ಯ ಘೋಷಣೆಯಾದ ಬೆಳಗಾವಿ ಜಿಲ್ಲೆಯ ಕೆಲ ಕ್ಷೇತ್ರಗಳಿಗೆ ಶಾಸಕ ರಮೇಶ ಜಾರಕಿಹೊಳಿ ಸೂಚಿಸಿದವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ರಮೇಶ ಹಾರಕಿಹೊಳಿ ಕೈ ಮೇಲಾದಂತೆ ಆಗಿದೆ
ಅಥಣಿಯಲ್ಲಿ ಮಹೇಶ ಕುಮಟಳ್ಳಿ, ಕಾಗವಾಡಕ್ಕೆ ಶ್ರೀಮಂತ ಪಾಟೀಲ ಮತ್ತು ಬೆಳಗಾವಿ ಗ್ರಾಮೀಣದಿಂದ ನಾಗೇಧ ಮನ್ನೋಳಕರಗೆ ಟಿಕೆಟ್ ನೀಡಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಗೆ ಬೇಡಿಕೆ ಇಟ್ಟಿದ್ದ ಚಿಕ್ಕರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಬೈಲಹೊಂಗಲದಿಂದ ಜಗದೀಶ್ ಮೆಟಗುಡ್, ಸವದತ್ತಿಯಿಂದ ಮಾಮನಿ ಪತ್ನಿಗೆ ಟಿಕೆಟ್ ನೀಡಲಾಗಿದೆ. ಮತ್ತೊಂದು ಸಂಗತಿ ಎಂದರೆ ಕತ್ತಿ ಕುಟುಂಬದಲ್ಲಿ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಹುಕ್ಕೇರಿಗೆ ಉಮೇಶ ಕತ್ತಿ ಪುತ್ರ ನಿಖಿಲ್ ಕತ್ತಿ ಮತ್ತು ಚಿಕ್ಕೋಡಿಯಿಂದ ಮಾಜಿ ಸಂಸದ ರಮೇಶ ಕತ್ತಿಗೆ ಟಿಕೆಟ್ ನೀಡಲಾಗಿದೆ. ಖಾನಾಪುರದಲ್ಲಿ ಮೂಲ ಬಿಜೆಪಿಗ ವಿಠ್ಠಲ ಹಲಗೆಕರಗೆ ಟಿಕೆಟ್ ನೀಡಲಾಗಿದೆ