ಬಾಗಲಕೋಟೆ: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹುನಗುಂದ ಪಟ್ಟಣಕ್ಕೆ ಆಗಮಿಸಿದ ಶಸ್ತ್ರ ಸಜ್ಜಿತ ಪಡೆ ಮತ್ತು ಸ್ಥಳೀಯ ಪೊಲೀಸ್ ಪಡೆಗಳು ಪೊಲೀಸ್ ಠಾಣಿಯಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶುಕ್ರವಾರ ಪಥಸಂಚಲನ ನಡೆಸಿದರು.
ಹುನಗುಂದ ಪೊಲೀಸ್ ಠಾಣಿಯ ಸಿಪಿಐ ಸುರೇಶ ಬೆಂಡಗೊಂಬಳ ಮತ್ತು ಪಿಎಸ್‌ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ 50 ಜನ ಶಸ್ತ್ರ ಸಜ್ಜಿತ ಪಡೆ ಮತ್ತು 50ಕ್ಕೂ ಅಧಿಕ ಪೊಲೀಸ್ ಪೇದೆಗಳು ಸೇರಿದಂತೆ 100ಕ್ಕೂ ಅಧಿಕ ಮಂದಿ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನ, ಮೇನ್ ಬಜಾರ, ವಿ.ಮ ಸರ್ಕಲ್, ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿ ಮೂಲಕ ಮರಳಿ ಪೊಲೀಸ್ ಠಾಣಿವರೆಗೆ ಪಥಸಂಚಲನ ಮಾಡಿದರು.