ಸಿಕಂದರಾಬಾದ್ – ತಿರುಪತಿಗೆ ವಂದೇ ಭಾರತ್ ರೈಲ್

ವಂದೇ ಭಾರತ
Advertisement

ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರು ಸಿಕಂದರಾಬಾದ್‌ ಹಾಗೂ ತಿರುಪತಿ ನಡುವೆ ನೂತನ ವಂದೇ ಭಾರತ್‌ ರೈಲಿಗೆ ಚಾಲನೆ ನೀಡಿದರು. ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಇದ್ದು. ಈ ರೈಲು 10 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಸಿಕಂದರಾಬಾದ್ – ತಿರುಪತಿ ವಂದೇ ಭಾರತ್ ರೈಲು (20701) ಸಿಕಂದರಾಬಾದ್ ರೈಲು ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2.30ಕ್ಕೆ ತಿರುಪತಿ ತಲುಪುತ್ತದೆ. ತಿರುಪತಿ – ಸಿಕಂದರಾಬಾದ್ ವಂದೇ ಭಾರತ್ ರೈಲು (20702) ತಿರುಪತಿ ರೈಲು ನಿಲ್ದಾಣದಿಂದ ಮಧ್ಯಾಹ್ನ 3.15 ಕ್ಕೆ ಹೊರಡುತ್ತದೆ. ರಾತ್ರಿ 11.45ಕ್ಕೆ ಸಿಕಂದರಾಬಾದ್ ತಲುಪುತ್ತದೆ.