84 ಸಾವಿರ ಮೌಲ್ಯದ ಮದ್ಯ ವಶ

Advertisement

ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಸಾಗಾಟದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು, ಜಿಲ್ಲೆಯ ವಿವಿಧೆಡೆ ಅಬಕಾರಿ ಅಧಿಕಾರಿಗಳಿಂದ ದಾಳಿ ಲಕ್ಷಾಂತರ ರೂಪದಲ್ಲಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಅಫಜಲಪೂರ ತಾಲೂಕಿನ ಚೌಡಾಪುರ ಬಳಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶಪಡಿಸಿಕೊಂಡಿದ್ದಾರೆ.

84 ಸಾ ರೂ.ಮೌಲ್ಯದ 198 ಲೀಟರ್ ಮದ್ಯ ವಶ ಪಡಿಕೊಳ್ಳಲಾಗಿದೆ.

ಶೇಖರ್ ಎಂಬಾತನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದು, ಒಂದು ಕಾರು ಕೂಡ ಜಪ್ತಿ ಮಾಡಿದ್ದಾರೆ.

ಇನ್ನೂ ಚಿತ್ತಾಪೂರ ತಾಲೂಕಿನ ಕುಂಬಾರ ಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಆಗಿಸುತ್ತಿದ್ದ 10 ಲೀಟರ್ ಕಲಬೆರಕೆ ಸೇಂದಿ ವಶಕ್ಕೆ‌ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿದಂತೆ ಬಾಶಾಮಿಯಾ ಎಂಬಾತನ ಬಂಧನ ಮಾಡಲಾಗಿದೆ.

15 ಸಾ.ಮೌಲ್ಯದ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ಕೂಡ ಜಪ್ತಿ ಮಾಡಲಾಗಿದೆ.

ಸೇಡಂ ತಾಲೂಕಿನ ಬಟಗೇರ ಬಿ ಬಳಿ 51.840 ಲೀಟರ್ ಅಕ್ರಮ ಮದ್ಯ ವಶಪಡಿಸಲಾಗಿದೆ.

ಆರೋಪಿ ಪರಾರಿ ಬಂಧನಕ್ಕೆ ಅಬಕಾರಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಒಂದು ಬೈಕ್ ಹಾಗೂ 20 ಸಾ ಮೌಲ್ಯದ ಮದ್ಯ ವಶಪಡಿಸಲಾಗಿದೆ.